ಬೆಂಗಳೂರು: ‘ನಗರದಲ್ಲಿ ಮೆಟ್ರೊ ರೈಲು ಸಂಚಾರ ಸಮಯ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಇದು ನ್ಯಾಯಯುತವಾದ ಕೂಗು. ರಾತ್ರಿ 8ರ ನಂತರವೂ ಮೆಟ್ರೊ ರೈಲು ಸಂಚಾರ ಸಮಯ ವಿಸ್ತರಿಸಬೇಕು‘ ಎಂದು ಒತ್ತಾಯಿಸಿ ಶಾಸಕ ಎಸ್. ಸುರೇಶ್‌ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
‘ಈ ಪತ್ರವನ್ನು ನಾನು ಶಾಸಕನಾಗಿ ಮಾತ್ರ ಬರೆಯುತ್ತಿಲ್ಲ. ಮೆಟ್ರೊ ರೈಲಿನ ಒಬ್ಬ ಪ್ರಯಾಣಿಕನಾಗಿಯೂ ಬರೆಯುತ್ತಿದ್ದೇನೆ. ಮೆಟ್ರೊ ಕಾರ್ಯಾಚರಣೆ ಸಮಯವನ್ನು ರಾತ್ರಿ 10ರವರೆಗೆ ವಿಸ್ತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ... ಮೆಟ್ರೊ ಸಂಚಾರ ಅವಧಿ ವಿಸ್ತರಣೆಗೆ ಸಚಿವರ ಒತ್ತಾಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.