ಶನಿವಾರ, ಅಕ್ಟೋಬರ್ 23, 2021
21 °C

ಬಹುಮಹಡಿ ಕಟ್ಟಡ ಕುಸಿತ ಪ್ರಕರಣ: ಮಾಲೀಕನ ವಿರುದ್ಧ ಎಫ್ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಕ್ಕಸಂದ್ರದಲ್ಲಿ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ, ಕಟ್ಟಡದ ಮಾಲೀಕ ಸುರೇಶ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

 '50 ವರ್ಷಗಳ ಹಳೆಯ ಕಟ್ಟಡ ಹಲವು ದಿನಗಳ ಹಿಂದೆಯೇ ಬಿರುಕು ಬಿಟ್ಟಿತ್ತು. ಆದರೆ, ಮಾಲೀಕ ನಿರ್ಲಕ್ಷ್ಯ ವಹಿಸಿದ್ದ. ಕಟ್ಟಡ ತೆರವಿಗೆ ಪ್ರಯತ್ನಿಸಿರಲಿಲ್ಲ. ಕಟ್ಟಡದಲ್ಲಿರುವ‌ ಕೊಠಡಿಗಳನ್ನು ಬಾಡಿಗೆ ಕೊಟ್ಟಿದ್ದ. ಪ್ರತಿ ತಿಂಗಳಯ ಬಾಡಿಗೆ ವಸೂಲಿ‌ ಮಾಡಲು ಕಟ್ಟಡಕ್ಕೆ‌ ಬಂದು ಹೋಗುತ್ತಿದ್ದ. ಬಾಡಿಗೆದಾರರು ಬಿರುಕಿನ ಬಗ್ಗೆ ಪ್ರಸ್ತಾಪಿಸಿದರೂ ಏನು ಆಗುವುದಿಲ್ಲವೆಂದು ಆತ ಹೇಳುತ್ತಿದ್ದ' ಎಂದು ಪೊಲೀಸ್ ಮೂಲಗಳು ಹೇಳಿವೆ‌.

'ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.'

ಇದನ್ನೂ ಓದಿ: 

'ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾನೆ. ಕಟ್ಟಡಗಳ ಅವಶೇಷಗಳ‌ ತೆರವು ನಡೆಯುತ್ತಿದೆ' ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು