ಶನಿವಾರ, ಡಿಸೆಂಬರ್ 14, 2019
20 °C

ಜಗಳ ಬಿಡಿಸಲು ಹೋಗಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಗಳ ಬಿಡಿಸಲು ಹೋಗಿದ್ದ ವೆಂಕಟೇಶ್ (36) ಎಂಬು ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಬಗ್ಗೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವೆಂಕಟೇಶ್‌, ಕೆಲಸ ಹುಡುಕಿಕೊಂಡು ಹದಿನೈದು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದು, ಇಟ್ಟಮಡುವಿನಲ್ಲಿ ನೆಲೆಸಿದ್ದರು.

‘ವೆಂಕಟೇಶ್ ಅವರು ಊಟಕ್ಕೆಂದು ಬುಧವಾರ ರಾತ್ರಿ ಇಟ್ಟಮಡುವಿನಲ್ಲಿರುವ ಸಂಬಂಧಿಕರ ಹೋಟೆಲ್‌ಗೆ ಹೋಗಿದ್ದರು. ಅದೇ ಹೋಟೆಲ್‌ಗೆ ಬಂದಿದ್ದ ಆರೋಪಿಗಳಾದ ರಾಘವೇಂದ್ರ, ದರ್ಶನ್ ಹಾಗೂ ರುದ್ರೇಶ್ ಪರಸ್ಪರ ಜಗಳ ಮಾಡಲಾರಂಭಿಸಿದ್ದರು. ಮಧ್ಯ ಪ್ರವೇಶಿಸಿದ್ದ ವೆಂಕಟೇಶ್, ಜಗಳ ಬಿಡಿಸಲು ಯತ್ನಿಸಿದ್ದರು. ಆಗ, ಆರೋಪಿ ದರ್ಶನ್ ಹಾಗೂ ವೆಂಕಟೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು’ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹೇಳಿದರು.

‘ಹೋಟೆಲ್‌ನಿಂದ ಹೊರಗೆ ಬಂದಾಗ ವೆಂಕಟೇಶ್ ಜೊತೆ ಜಗಳ ತೆಗೆದಿದ್ದ ಆರೋಪಿಗಳು, ಅವರ ಎದೆಗೆ ಚಾಕುವಿನಿಂದ ಇರಿದಿದ್ದರು. ತೀವ್ರ ಗಾಯಗೊಂಡ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದರು’ ಎಂದು ತಿಳಿಸಿದರು. ‘ಆರೋಪಿಗಳ ವಿರುದ್ಧ ಈ ಹಿಂದೆ ಯಾವುದಾದರೂ ಪ್ರಕರಣ ದಾಖಲಾಗಿತ್ತಾ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು