ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಪ್ರಪಂಚ: ವೈವಿಧ್ಯ - ವಿಸ್ಮಯ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

1. ಸಸ್ತನಿ ವರ್ಗಕ್ಕೇ ಸೇರಿದ, ಅದರಲ್ಲೂ ನಮ್ಮ ಪ್ರೈಮೇಟ್ ಕುಟುಂಬಕ್ಕೇ ಸೇರಿದ, ಪುಟ್ಟ ಗಾತ್ರದ ಪ್ರಸಿದ್ಧ ನಿಶಾಚರ ಪ್ರಾಣಿಯೊಂದು ಚಿತ್ರ-1ರಲ್ಲಿದೆ. ಯಾವುದು ಈ ಪ್ರಾಣಿ ಗೊತ್ತೇ?
ಅ. ಗೂಬೆ ಮಂಗ→ಬ. ಲೀಮರ್
ಕ. ಲೋರಿಸ್ →ಡ. ಆಯ್-ಆಯ್

2. ಚಿತ್ರ-4ರಲ್ಲಿರುವ ‘ಕೀಟ’ವನ್ನು ಗಮನಿಸಿ. ಈ ಕೀಟ ಯಾವುದು? ಇದು ಈ ಕೆಳಗೆ ಹೆಸರಿಸಿರುವ ಯಾವ ಕೀಟಕ್ಕೆ ಜೈವಿಕವಾಗಿ ಅತ್ಯಂತ ಹತ್ತಿರದ ಸಂಬಂಧಿ?
ಅ. ಪಾತರಗಿತ್ತಿ→ಬ. ದುಂಬಿ
ಕ. ಮಿಡತೆ→ಡ. ಗೆದ್ದಲು

3. ಸುಂದರ ಗಿಣಿಯೊಂದು ಚಿತ್ರ-3ರಲ್ಲಿದೆ. ಕೆಳಗಿನ ಪಟ್ಟಿಯಲ್ಲಿರುವ ಯಾವ ಹಕ್ಕಿ ಗಿಣಿಗಳ ಕುಟುಂಬಕ್ಕೆ ಸೇರಿಲ್ಲ?
ಅ. ಪ್ಯಾರಟ್ →ಬ. ಪ್ಯಾರಾಕೀಟ್
ಕ. ಲೋರಿಕೀಟ್ →ಡ. ಲವ್ ಬರ್ಡ್
ಇ. ಮಕಾ →ಈ. ಕೊಕ್ಯಾಟೊ
ಉ. ಟೌಕಾನ್

4. ಕತ್ತೆ, ಕುದುರೆಗಳ ‘ಈಕ್ವಿಡ್’ ಕುಟುಂಬಕ್ಕೇ ಸೇರಿದ ಸುಪರಿಚಿತ ಪ್ರಾಣಿ ‘ಜೀಬ್ರಾ’ ಹಿಂಡೊಂದು ಚಿತ್ರ-2ರಲ್ಲಿದೆ. ಜೀಬ್ರಾಗಳ ನೈಸರ್ಗಿಕ ನೆಲೆಯಲ್ಲಿ ಜೀಬ್ರಾಗಳ ಸಹಚರರಲ್ಲದ ಪ್ರಾಣಿಗಳನ್ನು ಈ ಪಟ್ಟಿಯಲ್ಲಿ ಪತ್ತೆಹಚ್ಚಬಲ್ಲಿರಾ?
ಅ. ವೈಲ್ಡ್ ಬೀಸ್ಟ್ →ಬ. ಇಂಪಾಲಾ
ಕ. ಕರಿ ಚಿಗರೆ →ಡ. ಸಿಂಹ
ಇ. ಹುಲಿ →ಈ. ಜಾಗ್ವಾರ್
ಉ. ಜಿರಾಫ್

5. ಆಫ್ರಿಕಾದ ಹುಲ್ಲು ಬಯಲು ‘ಸವನ್ನಾ’ದ ಕೆಲವು ಪ್ರಸಿದ್ಧ ಜಿಂಕೆ ವರ್ಗದ ಪ್ರಾಣಿಗಳನ್ನು ಇಲ್ಲಿ ಹೆಸರಿಸಲಾಗಿದೆ. ಚಿತ್ರ-5ರಲ್ಲಿರುವ ಪರಮ ವೇಗದ ಓಟಗಾರ ಈ ಪಟ್ಟಿಯಲ್ಲಿ ಯಾವುದು?
ಅ. ಈಲ್ಯಾಂಡ್ →ಬ. ಕುಡು
ಕ. ಗೆಜೆಲ್ →ಡ. ಸ್ಪ್ರಿಂಗ್ ಬಾಕ್
ಇ. ಜಮ್ಸ್ ಬಾಕ್ →ಈ. ಆರಿಕ್ಸ್

6. ವಿಶಿಷ್ಟ ಮತ್ಸ್ಯಗಳಾದ ಶಾರ್ಕ್‌ಗಳಲ್ಲಿ ಒಂದಾದ, ಅತ್ಯಂತ ಪ್ರಸಿದ್ಧ ‘ದಿ ಗ್ರೇಟ್ ವೈಟ್ ಶಾರ್ಕ್’ ಚಿತ್ರ-6ರಲ್ಲಿದೆ. ಶಾರ್ಕ್‌ಗಳಲ್ಲೆಲ್ಲ ದಿ ಗ್ರೇಟ್ ವೈಟ್‌ನ ವಿಶಿಷ್ಟ ಗುಣ ಇವುಗಳಲ್ಲಿ ಯಾವುದು?
ಅ. ಅತ್ಯಂತ ದೈತ್ಯ ಗಾತ್ರ
ಬ. ಅತ್ಯಂತ ಚಿಕ್ಕ ಗಾತ್ರ
ಕ. ಅತ್ಯಂತ ವೇಗದ ಈಜು ಸಾಮರ್ಥ್ಯ
ಡ. ಅತ್ಯಂತ ಉಗ್ರ ಬೇಟೆಗಾರ ಸ್ವಭಾವ

7. 37 ಪ್ರಭೇದಗಳಿಂದ ಕೂಡಿದ ಬೆಕ್ಕುಗಳ ಕುಟುಂಬ ‘ಫೆಲಿಡೇ’ಯ ಒಂದು ಪ್ರಭೇದ ಚಿತ್ರ-7ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಚಿತ್ರದಲ್ಲಿರುವ ಬೆಕ್ಕು ಯಾವುದು ಮತ್ತು ಯಾವುದು ಬೆಕ್ಕುಗಳ ಕುಟುಂಬಕ್ಕೆ ಸೇರಿದ ಪ್ರಾಣಿ ಅಲ್ಲ?
ಅ. ಮಾರ್ಗೇ →ಬ. ಕಾಗ್ವಾರ್
ಕ. ಲಿಂಕ್ಸ್ →ಡ. ಪ್ಯೂಮಾ
ಇ. ಕ್ಯಾರಕಲ್ →ಈ. ವಿಕ್ಯೂನಾ
ಈ. ಸೆರ್ವಲ್

8. ಜಗದ್ವಿಖ್ಯಾತ ಪ್ರಾಣಿ ‘ಘೇಂಡಾಮೃಗ’ ಚಿತ್ರ-9ರಲ್ಲಿದೆ. ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಕೆಲವು ರಾಷ್ಟ್ರಗಳಿಗಷ್ಟೇ ಸೀಮಿತವಾದ ನೆಲೆ ಹೊಂದಿರುವ ಈ ಪ್ರಾಣಿಗಳ ವಾಸಕ್ಷೇತ್ರ ಇಲ್ಲಿರುವ ಪಟ್ಟಿಯ ಯಾವ ಯಾವ ದೇಶಗಳಲ್ಲಿದೆ?

ಅ. ದಕ್ಷಿಣ ಆಫ್ರಿಕಾ →ಬ. ಚೀನಾ
ಕ. ಭಾರತ →ಡ. ಬರ್ಮಾ (ಮ್ಯಾನ್ಮಾರ್)
ಇ. ನೇಪಾಳ →ಈ. ತಾಂಜಾನಿಯಾ
ಉ. ಇಂಡೊನೇಷ್ಯಾ →ಟ. ಥಾಯ್ಲೆಂಡ್
ಣ. ಮಡಗಾಸ್ಕರ್

9. ಅತ್ಯಂತ ಹಗುರವಾದ, ಅತ್ಯಂತ ನವಿರಾದ ಉಣ್ಣೆಗೆ ಮೂಲವಾಗಿ, ಅದಕ್ಕಾಗಿ ಕಳ್ಳ ಬೇಟೆಗಾರರಿಂದ ನಿರಂತರ ಕಗ್ಗೊಲೆಗೊಂಡು, ಅಲ್ಪ ಸಂಖ್ಯಾತವಾಗಿ, ಅಳಿವ ಹಂತ ತಲುಪಿರುವ ವಿಖ್ಯಾತ ಪ್ರಾಣಿ ‘ಕೈರು’ ಚಿತ್ರ-11ರಲ್ಲಿದೆ. ಈ ಪ್ರಾಣಿಯಿಂದ ಪಡೆವ ಉಣ್ಣೆಗೆ ಏನು ಹೆಸರು?
ಅ. ಚಾಟೂಶ್ →ಬ. ಮೆರೀನೋ
ಕ. ಪಾಶ್ಮಿನಾ →ಡ. ಅಂಗೋರಾ
ಇ. ಅಲ್ಪಾಕಾ

10. ನೆಲದ ಮೇಲೆ ಜಾರುತ್ತ ಕಡಲಿನೆಡೆಗೆ ಸಾಗುತ್ತಿರುವ ಪ್ರಾಣಿಗಳ ಗುಂಪೊಂದರ ದೃಶ್ಯ ಚಿತ್ರ-10ರಲ್ಲಿದೆ. ಈ ಪ್ರಾಣಿಯನ್ನು ಗುರುತಿಸುವುದು ಸಾಧ್ಯವೇ?
ಅ. ಸೀಲ್ →ಬ. ಸಮುದ್ರ ಸಿಂಹ
ಕ. ವಾಲ್ರಸ್ →ಡ. ಪೆಂಗ್ವಿನ್

11. ಹಾರಾಟ ಸಾಮರ್ಥ್ಯ ಪಡೆದಿರುವ ಏಕಮಾತ್ರ ಸಸ್ತನಿ ಎಂಬ ವೈಶಿಷ್ಟ್ಯ ಪಡೆದಿರುವ ‘ಬಾವಲಿ’ ಚಿತ್ರ-8ರಲ್ಲಿದೆ. ನಿಶಾಚರ ಬಾವಲಿ ಪ್ರಭೇದಗಳ ಕತ್ತಲಲ್ಲೂ ಬೇಟೆಯಾಡಬಲ್ಲ ತಂತ್ರ ಈ ಕೆಳಗಿನ ಯಾವ ವೈಜ್ಞಾನಿಕ ಆವಿಷ್ಕಾರಕ್ಕೆ ಕಾರಣವಾಗಿದೆ ಗೊತ್ತೇ?
ಅ. ರೇಡಾರ್ →ಬ. ಸೋನಾರ್
ಕ. ಲೇಸರ್ →ಡ. ಸೇಸರ್

12. ಗಾಢ ವರ್ಣಾಲಂಕೃತ ಮಂಗ ಪ್ರಭೇದಗಳ ಎರಡು ವಿಧಗಳು ಚಿತ್ರ-12 ಮತ್ತು ಚಿತ್ರ-13ರಲ್ಲಿವೆ. ಈ ಮಂಗಗಳನ್ನು ಗುರುತಿಸಬಲ್ಲಿರಾ?
ಅ. ಗೋಲ್ಡನ್ ಮಾರ್ಮಾಸೆಟ್
ಬ. ಡೌಕ್ ಲಂಗೂರ್
ಕ. ಜಪನೀಸ್ ಮೆಕಾಕ್
ಡ. ರೀಸಸ್ ಮೆಕಾಕ್
ಇ. ಮ್ಯಾಂಡ್ರಿಲ್  
ಈ. ಲಯನ್ ತಮರಿನ್
ಉ. ಹನುಮಾನ್ ಲಂಗೂರ್

13. ಪ್ರತಿ ವರ್ಷ ಚಳಿಗಾಲವನ್ನಿಡೀ ನಿದ್ರೆಯಲ್ಲಿ ಕಳೆವ ಕೆಲವು ಪ್ರಾಣಿಗಳಿರುವುದು ನಿಮಗೆ ಗೊತ್ತಲ್ಲ (ಚಿತ್ರ-14)? ಹಾಗೆ ಚಳಿ ನಿದ್ದೆ ಮಾಡುವ ವಿಶಿಷ್ಟ ಪ್ರಾಣಿಗಳಲ್ಲಿ ಕೆಲವು ಈ ಪಟ್ಟಿಯಲ್ಲಿವೆ. ಅವನ್ನು ಗುರುತಿಸಿ:
ಅ. ಪ್ರೇರೀ ನಾಯಿ →ಬ. ಧ್ರುವ ಕರಡಿ
ಕ. ನಾಗರ ಹಾವು →ಡ. ಕಾಡು ಬೆಕ್ಕು
ಇ. ಬಾವಲಿ →ಈ. ಅಳಿಲು
ಉ. ಕಾಡು ಹಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT