ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡೀಕರಣಗೊಳ್ಳದ ಊರ ಹೆಸರು

ಏಕರೂಪ ಪದಬಳಕೆ, ಇಂಗ್ಲಿಷ್‌ನಲ್ಲಿ ಅಕ್ಷರ ನಿರ್ಧರಿಸಲು ಒತ್ತಾಯ
Last Updated 24 ನವೆಂಬರ್ 2022, 20:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಗ್ರಾಮ, ಪಟ್ಟಣ, ನಗರ, ಪ್ರದೇಶಗಳ ಹೆಸರು ಕನ್ನಡವಾಗಿರಲಿ... ಕನ್ನಡಉಚ್ಚಾರಣೆ
ಯಂತೆಯೇಇಂಗ್ಲಿಷ್‌ನಲ್ಲಿ ಅದನ್ನುಬರೆಯುವಂತಾಗಲಿಎಂಬ ಬಹು ವರ್ಷದ ಬೇಡಿಕೆ ಇನ್ನೂ ಈಡೇರಿಲ್ಲ.

ರಾಜ್ಯದ 12 ನಗರಗಳ ಹೆಸರನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಹೇಗೆ ಬರೆಯಬೇಕು ಎಂಬುದನ್ನು ಅಧಿಕೃತ
ಗೊಳಿಸಿ 2014ರಲ್ಲಿ ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದಾದ ನಂತರ, ರಾಜ್ಯದ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮಗಳ ಹೆಸರನ್ನೂ ಇದೇ ರೀತಿ ಅಧಿಕೃತಗೊಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ, ಈವರೆಗೆ ಯಾವುದೇ ಕ್ರಮವಾಗಿಲ್ಲ.

ಇಂಗ್ಲಿಷ್‌ನಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಹಳ್ಳಿ, ಪಟ್ಟಣ, ಪ್ರದೇಶಗಳ ಹೆಸರನ್ನು ಸಾಕಷ್ಟು ಬಾರಿ ತಪ್ಪಾಗಿಬರೆಯಲಾಗುತ್ತಿದೆ. ಉದಾಹರಣೆಗೆ ರಾಣೆಬೆನ್ನೂರು– ರಾಣಿಬೆನ್ನೂರು, ಹೊನ್ನಾಳಿ–ಹೊನ್ನಳ್ಳಿ, ಗುರುಮಿಟಕಲ– ಗುರ್‌ಮಿಟ್ಕಲ್‌, ಗುರಮಿಟ್ಕಲ್‌, ಮಸ್ಕಿ– ಮಾಸ್ಕಿ, ಪಿರಿಯಾಪಟ್ಟಣ– ಪೆರಿಯಾಪಟ್ಟಣ, ಲಕ್ಷ್ಮೇಶ್ವರ– ಲಕ್ಷ್ಮೀಶ್ವರ, ಅಣ್ಣಿಗೇರಿ– ಅಣ್ಣೇಗೇರಿ, ಅನ್ನೀಗೆರೆ, ಇಟ್ಟಮಡು– ಇಟ್ಟುಮಡು, ಹುಲ್ಲಾಳು–ಉಲ್ಲಾಳ, ಹುಲ್ಲಾಳ, ಕಣಿಮಿಣಿಕೆ–ಕಣ್ಮಿಣಿಕೆ, ಸೊಣ್ಣೇನಹಳ್ಳಿ–ಸೊನ್ನೇಹಳ್ಳಿ... ಹೀಗೆ ಹಲವು ರೀತಿಯಲ್ಲಿ ಬಳಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲೇ ಬಳಕೆ ವಿಭಿನ್ನವಾಗಿರುತ್ತದೆ. ಇನ್ನು ನಾಮಫಲಕಗಳಲ್ಲಿ ಪ್ರದೇಶಗಳ ಹೆಸರು ಒಂದೊಂದುಕಡೆಒಂದೊಂದು ರೀತಿ ಇರುತ್ತದೆ. ಇಂಗ್ಲಿಷ್‌ನಲ್ಲಿ ಬರೆದಿರುವುದು ಬೇರೆ ಅರ್ಥವೇ ಬರುವಂತಾಗಿದೆ. ಊರು–ನಗರಗಳ ಹೆಸರು ಅಪಾರ್ಥಕ್ಕೆ ಎಡೆ ಮಾಡಿಕೊಡದಂತೆ ನಿರ್ದಿಷ್ಟ ಹೆಸರನ್ನೇ ಬಳಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂಬ ಆಗ್ರಹಕ್ಕೆ ಬೆಲೆ ಸಿಕ್ಕಿಲ್ಲ.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರದೇಶಗಳ ಹೆಸರನ್ನು ಮನಸೋಇಚ್ಛೆ ಬರೆಯಲಾಗಿರುತ್ತದೆ. ಕಾಗುಣಿತ ತಪ್ಪಾಗಿ ಊರಿನ ಹೆಸರಿನ ಬಗ್ಗೆ ಅಪಹಾಸ್ಯ ಮಾಡುವಂತಹ ಸಂದರ್ಭಗಳೂ ಘಟಿಸಿವೆ. ಸ್ಥಳಿಯ ಸಂಘ–ಸಂಸ್ಥೆಗಳು ಪ್ರತಿಭಟಿಸಿ, ಫಲಕಗಳಿಗೆ ಮಸಿ ಬಳಿದ ಪ್ರಕರಣಗಳೂ ಸಾಕಷ್ಟಾಗಿವೆ.

ಒಂದುಗ್ರಾಮಅಥವಾ ಪ್ರದೇಶಕ್ಕೆಹೆಸರಿಸಬೇಕೆಂದರೆಅದಕ್ಕೆ ಹಲವು ಹಿನ್ನೆಲೆ ಇರುತ್ತದೆ. ಆದರೆ, ಅದನ್ನು ಸರ್ಕಾರಿ ದಾಖಲೆಗಳಲ್ಲೇ ಬೇರೆಬೇರೆ ರೀತಿಬರೆಯಲಾಗುತ್ತಿದೆ. ‍ಪದಬಳಕೆ ವಿಭಿನ್ನವಾಗಿ
ರುತ್ತದೆ. ಉಚ್ಚಾರಣೆಯಂತೆಕೆಲವು ಬಾರಿಬರೆಯಲಾಗುತ್ತದೆ. ಆದ್ದರಿಂದ ರಾಜ್ಯದ ಎಲ್ಲ ಪ್ರದೇಶಗಳ ಹೆಸರನ್ನು ಕಂದಾಯ ದಾಖಲೆಗಳನ್ನು ಪರಿಶೀಲಿಸಿ ಒಂದೇ ರೀತಿಯಲ್ಲಿಬರೆಯುವಂತಾಗಬೇಕು. ಭಾಷೆ ಬಳಕೆ
ಸ್ವಚ್ಛವಾಗಬೇಕು. ಜೊತೆಗೆ, ಇಂಗ್ಲಿಷ್‌ನಲ್ಲಿ ಅದನ್ನು ಹೇಗೆ ಬರೆಯಬೇಕುಎಂಬುದನ್ನುಸರ್ಕಾರವೇಅಧಿಕೃತಗೊಳಿಸಬೇಕೆಂಬಆಗ್ರಹ ಕನ್ನಡಪರ ಸಂಘಟನೆಗಳದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT