ಶಿಕ್ಷಣ ನೀತಿ: 20ರಂದು ಶೈಕ್ಷಣಿಕ ಸಮಾಲೋಚನೆ

ಶುಕ್ರವಾರ, ಜೂನ್ 21, 2019
24 °C

ಶಿಕ್ಷಣ ನೀತಿ: 20ರಂದು ಶೈಕ್ಷಣಿಕ ಸಮಾಲೋಚನೆ

Published:
Updated:

ಬೆಂಗಳೂರು: ಚೈಲ್ಡ್ ರೈಟ್ಸ್ ಟ್ರಸ್ಟ್‌ ಹಾಗೂಇಂಡಿಯಾ ಲಿಟರಸಿ ಪ್ರಾಜೆಕ್ಟ್‌  ಸಹಯೋಗದಲ್ಲಿ ಇದೇ 20ರಂದು ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ‘ರಾಷ್ಟ್ರೀಯ ಶಿಕ್ಷಣ ನೀತಿ 2019’ರ ಕುರಿತು ಸಮಾಲೋಚನೆ ಏರ್ಪಡಿಸಲಾಗಿದೆ.

‘ರಾಷ್ಟ್ರದ ಶಿಕ್ಷಣ ಅವಶ್ಯಕತೆಗಳನ್ನು ಗಮನಿಸಿದ ಡಾ.ಕೆ.ಕಸ್ತೂರಿ ರಂಗನ್ ಸಮಿತಿ 18 ತಿಂಗಳು ಶ್ರಮವಹಿಸಿ ನೀತಿಯ ಕರಡನ್ನು ಸಿದ್ಧಪಡಿಸಿದೆ.‌ ಪ್ರಾಥಮಿಕಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಸಮಗ್ರ ಶಿಕ್ಷಣ, ಶಿಕ್ಷಕರ ತರಬೇತಿ ಮಾಹಿತಿಯನ್ನು ಹೊಂದಿರುವ ಈ ಕರಡುವಿಗೆ ಜೂನ್ 30 ರೊಳಗೆ ಸಲಹೆ ಸೂಚನೆಗಳನ್ನು ಕಳುಹಿಸಬೇಕಿದೆ. ಸಮಾಲೋಚನೆಯಲ್ಲಿ ಭಾಗವಹಿಸುವವರು ಕರಡನ್ನು ಅಧ್ಯಯನ ಮಾಡಿ ತಮ್ಮ ಸಲಹೆ, ಸೂಚನೆಗಳನ್ನು ತಿಳಿಸಬಹುದು’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಮಾಹಿತಿ ನೀಡಿದರು.

ಸ್ಥಳ–ಐ.ಎಸ್.ಐ, ಬೆನ್ಸನ್ ಟೌನ್‌,

ಸಂಪರ್ಕಕ್ಕೆ: 9880477198

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !