ಬೆಂಗಳೂರು: ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಮಹಿಳಾ ಮಾಲೀಕತ್ವದ ಬೆಂಗಳೂರಿನ ‘ಮಾಯಾ’ ಸಂಸ್ಥೆಯಿಂದ ‘ಮಾಯಾ ಉತ್ಸವ’ವನ್ನು ಆ.6ರಂದು ಬೆಳಿಗ್ಗೆ 10ರಿಂದ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾರತೀಯ ದೇವಾಲಯದ ಇತಿಹಾಸ ತಜ್ಞೆ ಚಿತ್ರ ಮಾಧವನ್ ಅವರು ‘ಕಾಂಜಿವರಂ ಮೋಟಿಪ್‌ಗಳು ಮತ್ತು ದೇವಸ್ಥಾನಗಳ ವಾಸ್ತುಶಿಲ್ಪಗಳ ಸ್ಫೂರ್ತಿ’ ಬಗ್ಗೆ ಶ್ರವ್ಯ ಮತ್ತು ದೃಶ್ಯ ಪ್ರಸ್ತುತಿ ಮಾಡಲಿದ್ದಾರೆ. ಸಂಧ್ಯಾ ರಾವ್ ಉಡುಪ ಅವರ ಭರತನಾಟ್ಯ ಮತ್ತು ಅನುಶ್ರೀ ಪದ್ಮನಾಭ ಅವರ ಒಡಿಶಿ ಜುಗಲ್‌ಬಂದಿ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದು ಮಾಯಾ ಸಂಸ್ಥಾಪಕಿ ಸ್ಮಿತಾ ಶ್ರೀನಾಥ್ ತಿಳಿಸಿದ್ದಾರೆ.
ಮಾಹಿತಿ ಮತ್ತು ನೋಂದಣಿಗೆ ಮೊಬೈಲ್: 99023 56001
ಇಮೇಲ್: weavemaya@gmail.com ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.