ಓಕಳಿಪುರ ಸಿಗ್ನಲ್ ಮುಕ್ತ ರಸ್ತೆ ಕಾಮಗಾರಿ : ಮಾರ್ಗ ಬದಲಾವಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಓಕಳಿಪುರದ ಬಳಿ ಕೈಗೊಂಡಿರುವ ಅಷ್ಟಪಥದ ಸಿಗ್ನಲ್ ಮುಕ್ತ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಖೋಡೆಸ್ ವೃತ್ತದ ಮೂಲಕ ನಗರ ರೈಲ್ವೆ ನಿಲ್ದಾಣದ ಕಡೆಗೆ ಸಂಚರಿಸುವ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಮಲ್ಲೇಶ್ವರ ಕಡೆಯಿಂದ ಬರುವ ವಾಹನಗಳು ಕೃಷ್ಣ ಫ್ಲೋರ್ ಮಿಲ್ ಸಿಗ್ನಲ್ ಬಳಿ ಎಡತಿರುವು ಪಡೆದು, ಧನ್ವಂತ್ರಿ ರಸ್ತೆಯ ಮೂಲಕ ಮೆಜೆಸ್ಟಿಕ್ ಕಡೆ ತೆರಳಬಹುದು ಅಥವಾ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಸಾಗಿ, ರಾಜಾಜಿನಗರದ ರಾಜಕುಮಾರ ರಸ್ತೆ ತಲುಪಿ, ಯು ಟರ್ನ್ ಪಡೆದು ಪುನಃ ಓಕಳಿಪುರ ಜಂಕ್ಷನ್‌ಗೆ ಬಂದು, ಮೆಜೆಸ್ಟಿಕ್ ಕಡೆಗೆ ಹೋಗಬಹುದಾಗಿದೆ.
ಬರಹ ಇಷ್ಟವಾಯಿತೆ?
1
0
0
0
0
0 comments
View All