ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ 27 ಐಸಿಯು ಹಾಸಿಗೆ ಮಾತ್ರ ಖಾಲಿ

Last Updated 22 ಏಪ್ರಿಲ್ 2021, 22:19 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಿದ್ದ 7,797 ಹಾಸಿಗೆಗಳ ಪೈಕಿ 6,244 ಭರ್ತಿಯಾಗಿವೆ. 1,553 ಹಾಸಿಗೆಗಳು ಖಾಲಿ ಇದ್ದು, 27 ಐಸಿಯು ಹಾಸಿಗೆಗಳು ಮಾತ್ರ ಲಭ್ಯವಿವೆ.

ಹಾಸ್ಪಿಟಲ್‌ ಬೆಡ್‌ ಮ್ಯಾನೇಜ್‌ಮೆಂಟ್‌ ವೆಬ್‌ಸೈಟ್‌ನಲ್ಲಿ ಪಾಲಿಕೆ ಈ ಮಾಹಿತಿ ಹಂಚಿಕೊಂಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಒಂದು ವೆಂಟಿಲೇಟರ್‌ ಸಹಿತ ಐಸಿಯು ಹಾಸಿಗೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ 14 ಸಾಮಾನ್ಯ ಐಸಿಯು ಹಾಸಿಗೆ ಮತ್ತು ಎಂಟು ವೆಂಟಿಲೇಟರ್‌ ಐಸಿಯು ಹಾಸಿಗೆಗಳು ಖಾಲಿ ಇವೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಾಲ್ಕು ಐಸಿಯು ಹಾಸಿಗೆಗಳು ಖಾಲಿ ಇವೆ.

ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ 1,313 ಸಾಮಾನ್ಯ ವಾರ್ಡ್‌ಗಳು ಹಾಗೂ 213 ಎಚ್‌ಡಿಯು ವಾರ್ಡ್‌ಗಳು ಖಾಲಿ ಉಳಿದಿವೆ.

ಸರ್ಕಾರ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 1,530 ಹಾಸಿಗೆಗಳು ಇವೆ. ಈ ಪೈಕಿ 545 ಭರ್ತಿಯಾಗಿದ್ದು, 985 ಖಾಲಿ ಇವೆ.

3,545 ಕೋವಿಡ್‌ ರೋಗಿಗಳು ಖಾಸಗಿಯಾಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,071 ಜನರು ಖಾಸಗಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿದ್ದಾರೆ. 37,149 ಮಂದಿ ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT