ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಪಿಂಡ ಸಮಸ್ಯೆ: ಒಮಾನ್ ಮಹಿಳೆಗೆ ಶಸ್ತ್ರಚಿಕಿತ್ಸೆ

Published 15 ಆಗಸ್ಟ್ 2023, 16:12 IST
Last Updated 15 ಆಗಸ್ಟ್ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಪಿಂಡ ಸಮಸ್ಯೆಗೆ ಪಾಕಿಸ್ತಾನದಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ ಇಲ್ಲಿಗೆ ಬಂದಿದ್ದ ಒಮನ್‌ನ 51 ವರ್ಷದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ಒದಗಿಸಿದ್ದಾರೆ. 

ವರ್ಷದ ಹಿಂದೆ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದ ಅವರು, ಪಾಕಿಸ್ತಾನದಲ್ಲಿ ಕಸಿ ಮಾಡಿಸಿಕೊಂಡಿದ್ದರು. ಆದರೆ, ಅಂಗಾಂಗ ಅವರ ದೇಹ ಹಾಗೂ ರಕ್ತಕ್ಕೆ ಹೊಂದಿಕೆಯಾಗಿರಲಿಲ್ಲ. ಮೂತ್ರನಾಳದ ಸ್ಟೆಂಟ್ ಹಾಗೂ ಮೂತ್ರ ವಿಸರ್ಜನೆಗೆ ಪ್ಲಾಸ್ಟಿಕ್ ನಳಿಕೆಯನ್ನು ಅಳವಡಿಸಲಾಗಿತ್ತು. ಇದು ತೆಳುವಾಗಿದ್ದರಿಂದ ವರ್ಷದಲ್ಲಿಯೇ  ಮುರಿದು ಹೋಯಿತು. ಬಳಿಕ ಅವರಿಗೆ ಮೂತ್ರಕೋಶದ ಸೋಂಕು ಹರಡಲು ಪ್ರಾರಂಭವಾಗಿತ್ತು. ಸ್ಟೆಂಟ್ ತೆಗೆಯುವುದು ಅನಿವಾರ್ಯವಾಗಿತ್ತು. ಪಾಕಿಸ್ತಾನದಲ್ಲಿ ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಸಿಗದಿದ್ದರಿಂದ ಅವರು ಇಲ್ಲಿಗೆ ಬಂದರು ಎಂದು ಆಸ್ಪತ್ರೆ ತಿಳಿಸಿದೆ. 

‘ಆಸ್ಪತ್ರೆಗೆ ದಾಖಲಾದ ಮಹಿಳೆಗೆ ನಮ್ಮಲ್ಲಿರುವ ರೋಬೋಟಿಕ್‌ ತಂತ್ರಜ್ಞಾನದ ನೆರವಿನಿಂದ ಮೂರು ಗಂಟೆಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಮುರಿದು ಹೋಗಿದ್ದ ಸ್ಟೆಂಟ್ ಹೊರತೆಗೆಯಲಾಯಿತು. ನೇರವಾಗಿ ಮೂತ್ರ ವಿಸರ್ಜನೆಗೆ ಸಮಸ್ಯೆಯಾಗದಂತೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಳಿಕ ರೋಗಿ ಸಂಪೂರ್ಣ ಗುಣಮುಖರಾಗಿದ್ದು, ಮೂತ್ರಕೋಶ ಸೋಂಕಿನಿಂದಲೂ ಚೇತರಿಸಿಕೊಂಡಿದ್ದಾರೆ’ ಎಂದು ಆಸ್ಪತ್ರೆಯ ಮೂತ್ರಶಾಸ್ತ್ರ ತಜ್ಞ ಡಾ. ಮೋಹನ್ ಕೇಶವಮೂರ್ತಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT