ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ ಹೆಚ್ಚಳ ನಿರೀಕ್ಷೆ

Last Updated 13 ಏಪ್ರಿಲ್ 2018, 19:31 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಭಾರತ ಅತ್ಯಂತ ಪ್ರಶಸ್ತ ತಾಣವಾಗಿದೆ. ಹೀಗಾಗಿ 5 ವರ್ಷಗಳಲ್ಲಿ ಹೂಡಿಕೆ ಮೊತ್ತ ₹ 4.87 ಲಕ್ಷ ಕೋಟಿಗೆ ತಲುಪಲಿದೆ ಎಂದು ಸ್ವಿಟ್ಜರ್ಲೆಂಡ್‌ನ ಹಣಕಾಸು ಸೇವಾ ಸಂಸ್ಥೆ ‘ಯುಬಿಎಸ್‌’ ಹೇಳಿದೆ.

‘ಕಳೆದ ಒಂದು ದಶಕದಿಂದೀಚೆಗೆ ಎಫ್‌ಡಿಐ ದ್ವಿಗುಣಗೊಂಡಿದೆ. 2016–17ರಲ್ಲಿ ₹ 2.73 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2017ರ ಡಿಸೆಂಬರ್‌ನಲ್ಲಿ ಹೂಡಿಕೆ ಪ್ರಮಾಣ ತುಸು ತಗ್ಗಿತ್ತು. ಆದರೆ, ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ’ ಇದೆ ಎಂದು ಸಂಸ್ಥೆಯ ಆರ್ಥಿಕ ತಜ್ಞರಾದ ತಾನ್ವಿ ಗುಪ್ತಾ ಜೈನ್‌ ಮತ್ತು ಎಡ್ವರ್ಡ್‌ ಟೀದರ್‌ ತಿಳಿಸಿದ್ದಾರೆ.

ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳುತ್ತಿರುವುದರಿಂದ ಎಫ್‌ಡಿಐ ಒಳಹರಿವು ಹೆಚ್ಚಾಗಲಿದೆ. ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಯಾರಿಕಾ ವಲಯವನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸುವ ಮೂಲಕ ಎಫ್‌ಡಿಐ ಹೂಡಿಕೆ ಪ್ರಮಾಣ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT