ಹಂದಿ ಕಾಟಕ್ಕೆ ಕಡಿವಾಣ ಹಾಕಿ: ಬಿಬಿಎಂಪಿಗೆ ಬೆಳ್ಳಂದೂರು ನಿವಾಸಿಗಳ ಒತ್ತಾಯ

7

ಹಂದಿ ಕಾಟಕ್ಕೆ ಕಡಿವಾಣ ಹಾಕಿ: ಬಿಬಿಎಂಪಿಗೆ ಬೆಳ್ಳಂದೂರು ನಿವಾಸಿಗಳ ಒತ್ತಾಯ

Published:
Updated:
Deccan Herald

ಬೆಂಗಳೂರು: ಹಂದಿಗಳ ಕಾಟಕ್ಕೆ ಕಡಿವಾಣ ಹಾಕುವಂತೆ ಬೆಳ್ಳಂದೂರು ನಿವಾಸಿಗಳು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.

‘ಹಂದಿಗಳಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಬಂದು ಹಂದಿಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಆದರೆ ಒಂದು ವಾರದೊಳಗೆ ಅವು ವಾಪಸ್‌ ಬಂದಿರುತ್ತವೆ. ಹಂದಿಗಳ ಮಾಫಿಯಾ ಇಲ್ಲಿ ಶುರುವಾದಂತೆ ಕಾಣುತ್ತದೆ’ ಎಂದು ಸ್ಥಳೀಯರು ದೂರಿದರು.

‘ಬೆಳ್ಳಂದೂರಿನ ಪ್ರತಿ ಬೀದಿಯಲ್ಲೂ ಕಡಿಮೆ ಎಂದರೂ 20 ಹಂದಿಗಳು ಕಾಣಸಿಗುತ್ತವೆ. ಎರಡು ತಿಂಗಳ ಹಿಂದೆ ಬಿಬಿಎಂಪಿಯವರು ಇವುಗಳನ್ನು ಹಿಡಿದಿದ್ದರು. ಆದರೆ, ಅವು ಮತ್ತೆ ಇಲ್ಲಿ ವಕ್ಕರಿಸಿವೆ’ ಎಂದು ಸ್ಥಳೀಯ ನಿವಾಸಿ ಎಂ.ನರೇಶ್‌ ಹೇಳಿದರು.

‘ಹಂದಿಗಳನ್ನು ಹಿಡಿದರೆ ಸ್ಥಳೀಯ ರೌಡಿಗಳಿಂದ ಬೆದರಿಕೆ ಬರುತ್ತದೆ. ತಮಗೆ ಪೊಲೀಸರ ರಕ್ಷಣೆ ಒದಗಿಸುವಂತೆಯೂ ಕೆಲವು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ. ಹಂದಿ ಸಾಕುವವರ ಮಾಫಿಯಾ ಕೂಡ ಹೆಚ್ಚುತ್ತಿದೆ. ಸ್ಥಳೀಯರೂ ರೌಡಿಗಳಿಗೆ ಹೆದರಿ ಸುಮ್ಮನಿದ್ದಾರೆ’ ಎಂದು ಅವರು ತಿಳಿಸಿದರು.

‘ಜನರು ರಸ್ತೆ ಬದಿಗಳಲ್ಲೇ ಕಸ ಹಾಕುತ್ತಿದ್ದಾರೆ. ಬಿಬಿಎಂಪಿಯವರೂ ಇಲ್ಲಿ ನಿತ್ಯ ಕಸ ವಿಲೇವಾರಿ ಮಾಡುತ್ತಿಲ್ಲ. ಹಂದಿಗಳ ಸಂಖ್ಯೆ ಹೆಚ್ಚಲು ಇದು ಕೂಡಾ ಕಾರಣ’ ಎಂದು ಸ್ಥಳೀಯ ನಿವಾಸಿ ಸುದರ್ಶನ್‌ ಶಾಸ್ತ್ರಿ ಹೇಳಿದರು.

‘ಪ್ರತಿ ದಿನ ಕಸ ಸಂಗ್ರಹಿಸಿದರೆ ಹಂದಿ ಕಾಟ ಕಡಿಮೆ ಆಗಲಿದೆ. ಹಂದಿಗಳಿಂದ ಮಾರಣಾಂತಿಕ ಕಾಯಿಲೆಗಳು ಹಬ್ಬುತ್ತವೆ. ಎಚ್‌ಎಸ್‌ಆರ್‌ ಲೇಔಟ್‌, ಹಲಸೂರು, ಬೆಳ್ಳಂದೂರು, ಸರ್ಜಾಪುರ ರಸ್ತೆಗಳಲ್ಲಿ ಹಂದಿಗಳು ಹೆಚ್ಚಾಗಿ ಕಾಣಿಸುತ್ತಿವೆ’ ಎಂದರು.

‘ಆರು ತಿಂಗಳ ಹಿಂದೆ ಹಂದಿ ಹಿಡಿಯಲು ಟೆಂಡರ್‌ ಕರೆಯಲಾಗಿತ್ತು. ಆದರೆ ಇದರಿಂದ ಹೆಚ್ಚು ಪ್ರಯೋಜನವಾಗಿಲ್ಲ. ಮುಂದಿನ ವಾರದಲ್ಲಿ ಹೊಸ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ’ ಎಂದು ಹೆಸರು ಹೇಳಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಹಂದಿ ಮಾಫಿಯಾ ಕುರಿತು ಮಾಹಿತಿ ಇರಲಿಲ್ಲ. ಸಮಸ್ಯೆ ನಿವಾರಣೆಗೆ ಗಮನಹರಿಸಲಿದ್ದೇವೆ’ ಎಂದು ಬಿಬಿಎಂಪಿಯ ಮಹಾದೇವಪುರದ ವಲಯದ ಜಂಟಿ ಆಯುಕ್ತೆ ವಾಸಂತಿ ಅಮರ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !