ಗುರುವಾರ , ನವೆಂಬರ್ 21, 2019
21 °C

ವಿಮಾನ ನಿಲ್ದಾಣ ರಸ್ತೆ ಬಳಕೆಗೆ ಶಾಲೆಗಳ ‘ಪ್ಲಾಸ್ಟಿಕ್‌ ಬೇಕು’ ಅಭಿಯಾನ

Published:
Updated:

ಬೆಂಗಳೂರು: ಬಿಗ್ ಎಫ್‌ಎಂನ ಆರ್‌.ಜೆಗಳು ನಗರದ 20 ಶಾಲೆಗಳಲ್ಲಿ ‘#ಪ್ಲಾಸ್ಟಿಕ್ ಬೇಕು’ ಅಭಿಯಾನ ನಡೆಸಲಿದ್ದು, ಸಂಗ್ರಹಿಸಿದ ಪ್ಲಾಸ್ಟಿಕ್‌ಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳಿಗೆ ಬಳಕೆ ಮಾಡಲಾಗುತ್ತದೆ. 

ನಗರವನ್ನು ಕಾಡುತ್ತಿರುವ ಪ್ಲಾಸ್ಟಿಕ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದ ರಸ್ತೆಗಳಿಗೆ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಆರಂಭವಾದ ಅಭಿಯಾನಕ್ಕೆ ರೇಡಿಯೊ ಚಾನಲ್ ಬಿಗ್ ಎಫ್‍ಎಂ ಕೈಜೋಡಿಸಿದೆ.

ಆರ್‌.ಜೆಗಳು ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಒಣ ಮತ್ತು ಹಸಿ ತ್ಯಾಜ್ಯಗಳನ್ನು ತೊಟ್ಟಿಗಳಲ್ಲಿ ಬೇರ್ಪಡಿ ಸುವ ಅಗತ್ಯತೆ, ಪ್ಲಾಸ್ಟಿಕ್ ತ್ಯಾಜ್ಯದ ಮರು ಬಳಕೆ ಬಗ್ಗೆ ಕೂಡಾ ತಿಳಿಸಿ ಕೊಡಲಿದ್ದಾರೆ. ಈ ವೇಳೆ ಶಾಲೆಗಳಲ್ಲಿ ಕಸ ಸಂಗ್ರಹದ ತೊಟ್ಟಿಗಳನ್ನು ಇಡಲಾ ಗುತ್ತದೆ. ಮೂರು ತಿಂಗಳು ಈ ಅಭಿಯಾನ ನಡೆಯಲಿದೆ. 

‘ಯುವ ಮನಸ್ಸುಗಳಿಗೆ ಪ್ಲಾಸ್ಟಿಕ್ ಬಗ್ಗೆ ತಿಳಿಸಿಕೊಟ್ಟಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಲಿದೆ.  ಮಕ್ಕಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವುದರಿಂದ ಉಳಿದವರಿಗೆ ಪ್ರೇರಣೆಯಾಗಲಿದೆ’ ಎಂದು ಆರ್.ಜೆ ಪ್ರದೀಪ ತಿಳಿಸಿದರು. 

ಪ್ರತಿಕ್ರಿಯಿಸಿ (+)