ಬೆಂಗಳೂರು: ‘ಆತಂಕ, ಖಿನ್ನತೆ, ಒತ್ತಡ ಮೊದಲಾದ ಮನೋಯಾತನೆಗಳಿಂದ ಬಳಲುತ್ತಿರುವ ವ್ಯಕ್ತಿಗಳು, ಅನಿಯಂತ್ರಿತವಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸುತ್ತಾರೆ’ ಎನ್ನುವುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಸಂಶೋಧಕರು ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

‘ಭಾರತೀಯ ವಯಸ್ಕರಲ್ಲಿ ಅಶ್ಲೀಲ ವಿಡಿಯೊ ವೀಕ್ಷಣೆ: ಮಾನಸಿಕ ಸಂಬಂಧಗಳು ಮತ್ತು ಮುನ್ಸೂಚಕಗಳು’ ಶೀರ್ಷಿಕೆಯಡಿ ಸಂಶೋಧನಾ ಪ್ರಬಂಧವನ್ನು ಎಂ. ರಾಜಶೇಖರ್, ಮನೋಜ್ ಕುಮಾರ್ ಶರ್ಮಾ ಮತ್ತು ಸೆಂಥಿಲ್ ಅಮುಧನ್ ಸಿದ್ಧಪಡಿಸಿದ್ದಾರೆ. ಇದು ‘ಜಿಯೋಸೈಕಿಯಾಟ್ರಿ’ ಜರ್ನಲ್ನಲ್ಲಿ ಪ್ರಕಟವಾಗಿದೆ.

‘ಅನಿಯಂತ್ರಿತ ಅಶ್ಲೀಲ ವಿಡಿಯೊಗಳ ವೀಕ್ಷಣೆಗೂ, ಮಾನಸಿಕ ಸಮಸ್ಯೆಗಳಿಗೂ ನಿಕಟ ಸಂಬಂಧವಿದೆ’ ಎನ್ನುವುದನ್ನು ಈ ಅಧ್ಯಯನ ಸಾಬೀತು ಮಾಡಿದೆ. ನಿಗದಿತ ವರ್ಗವು ಈ ವ್ಯಸನಕ್ಕೆ ಕಿರಿಯ ವಯಸ್ಸಿನಲ್ಲಿಯೇ ಒಳಪಡುವುದರಿಂದ, ದೈನಂದಿನ ಜೀವನದ ಕಾರ್ಯನಿರ್ವಹಣೆಯಲ್ಲಿಯೂ ನಕಾರಾತ್ಮಕ ಪರಿಣಾಮ ಎದುರಿಸುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶೈಕ್ಷಣಿಕ ಅರ್ಹತೆ: 18ರಿಂದ 46 ವರ್ಷದೊಳಗಿನ 112 ಮಂದಿಯನ್ನು ಆನ್ಲೈನ್ ವೇದಿಕೆ ಮೂಲಕ ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಸರಾಸರಿ ವಯಸ್ಸು 25 ಆಗಿದ್ದು, ಅಧ್ಯಯನಕ್ಕೆ ಒಳಪಟ್ಟವರಲ್ಲಿ ಬಹುತೇಕರು (ಶೇ 81.3 ರಷ್ಟು) ಪುರುಷರಾಗಿದ್ದಾರೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, ಸುಮಾರು ಅರ್ಧದಷ್ಟು ಮಂದಿ (ಶೇ 42 ರಷ್ಟು) ಪದವೀಧರರಾಗಿದ್ದಾರೆ. ಶೇ 26.8ರಷ್ಟು ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಶೇ 12.5ರಷ್ಟು, ಎಂ.ಫಿಲ್ ಮತ್ತು ಪಿಎಚ್.ಡಿ. ಪದವೀಧರರು ಶೇ 8.92ರಷ್ಟು ಮತ್ತು ಇತರೆ ಶೈಕ್ಷಣಿಕ ಅರ್ಹತೆ ಹೊಂದಿರುವವರು ಶೇ 1.8ರಷ್ಟಿದ್ದಾರೆ.

‘ಕಳೆದ ಕೆಲ ದಶಕಗಳಿಂದ ಅಶ್ಲೀಲ ವಿಡಿಯೊ ವೀಕ್ಷಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ಸುಲಭವಾಗಿ ವಿಡಿಯೊಗಳು ಲಭ್ಯವಾಗುವಿಕೆ, ಅನಾಮಧೇಯತೆ, ಡಿಜಿಟಲ್ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳೂ ಈ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಖಿನ್ನತೆ, ಆತಂಕ, ಒತ್ತಡವು ಅಶ್ಲೀಲ ವಿಡಿಯೊ ವೀಕ್ಷಣೆಗೆ ಪ್ರಚೋದಿಸುತ್ತಿವೆ’ ಎಂದು ಸಂಶೋಧಕರು ತಿಳಿಸಿದರು.

‘ಮಾನಸಿಕ ತೊಂದರೆಗಳನ್ನು ಎದುರಿಸುತ್ತಿರುವವರು, ಒತ್ತಡ, ಖಿನ್ನತೆಯಂತಹ ಸಮಸ್ಯೆಯಿಂದ ಹೊರಬರಲು ಸಹ ಅಶ್ಲೀಲ ವಿಡಿಯೊಗಳ ವೀಕ್ಷಣೆಗೆ ಮೊರೆಹೋಗುವ ಸಾಧ್ಯತೆಯಿದೆ’ ಎಂದು ಸಂಶೋಧಕರಲ್ಲಿ ಒಬ್ಬರಾದ ಎಂ. ರಾಜಶೇಖರ್ ಹೇಳಿದರು.

12 ವಾರಗಳ ಸಮೀಕ್ಷೆ ...

ಈ ಸಮೀಕ್ಷೆಯಲ್ಲಿ ಒಟ್ಟು 236 ಮಂದಿ ಭಾಗವಹಿಸಲು ಆಸಕ್ತಿ ತೋರಿದ್ದರು. ಸಮೀಕ್ಷೆ ಪ್ರಾರಂಭವಾಗುವ ಮೊದಲೇ 74 ಮಂದಿ ಈ ಪ್ರಕ್ರಿಯೆಯಿಂದ ಹೊರನಡೆದರು. 45 ಮಂದಿ ಅಪೂರ್ಣ ಮಾಹಿತಿ ಒದಗಿಸಿದ್ದರು. ಐವರು ಅಪ್ರಾಪ್ತ ವಯಸ್ಕರಾದ ಕಾರಣ ಅವರನ್ನು ಸಮೀಕ್ಷೆಯಿಂದ ಹೊರಗಿಡಲಾಗಿತ್ತು. ಅಂತಿಮವಾಗಿ 112 ಜನರನ್ನು ಸಮೀಕ್ಷೆ ಮಾಡಲಾಗಿದೆ. 12 ವಾರಗಳ ಅವಧಿಯಲ್ಲಿ ದತ್ತಾಂಶ ಸಂಗ್ರಹಿಸಲಾಗಿದೆ. ಮಾರ್ಚ್ 2024ರಿಂದ ಜೂನ್ 2024ರ ಅವಧಿಯಲ್ಲಿ ವಾಟ್ಸ್ ಆ್ಯಪ್ ಟೆಲಿಗ್ರಾಂ ಸೇರಿ ವಿವಿಧ ಸಾಮಾಜಿಕ ಮಾಧ್ಯಮ ಆ್ಯಪ್ಗಳ ನೆರವಿನಿಂದ ದತ್ತಾಂಶ ಕಲೆಹಾಕಿ ವಿಶ್ಲೇಷಿಸಲಾಗಿದೆ.

ವಿದ್ಯಾರ್ಥಿಗಳೇ ಅಧಿಕ

ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 50.9ರಷ್ಟು ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಉದ್ಯೋಗಸ್ಥರು ಶೇ 36.6ರಷ್ಟು ಸ್ವಯಂ ಉದ್ಯೋಗಿಗಳು ಶೇ 8ರಷ್ಟು ಗೃಹಿಣಿಯರು ಶೇ 1.8ರಷ್ಟು ಹಾಗೂ ಇತರ ಉದ್ಯೋಗದಲ್ಲಿ ತೊಡಗಿಕೊಂಡವರು ಶೇ 2.7ರಷ್ಟಿದ್ದಾರೆ. ಮನೋಯಾತನೆಗಳ ಜತೆಗೆ ಕಳೆದ ಆರು ತಿಂಗಳ ಅವಧಿಯಲ್ಲಿ ಅಥವಾ ಸದ್ಯ ಅಶ್ಲೀಲ ವಿಡಿಯೊ ವೀಕ್ಷಿಸುತ್ತಿರುವ 18 ವರ್ಷ ಮೇಲ್ಪಟ್ಟ ಭಾರತೀಯರನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.