ಮಂಗಳವಾರ, ಅಕ್ಟೋಬರ್ 26, 2021
23 °C

ಕೋವಿಡ್ ಚೇತರಿಕೆ: ಮಕ್ಕಳಲ್ಲಿ ಹೊಸ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡ ಕೆಲ ತಿಂಗಳ ಬಳಿಕ ಮಕ್ಕಳಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದನ್ನು ನಗರದ ವೈದ್ಯರು ಗುರುತಿಸಿದ್ದು, ಕಾಲು ಬೆರಳುಗಳು ಬಿಳಿಚುಕೊಳ್ಳುವಿಕೆ ಹಾಗೂ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. 

ಕೋರಮಂಗಲದ ಗ್ರೋಯಿಂಗ್ ಅಪ್ ಚಿಲ್ಡ್ರನ್ಸ್ ಕ್ಲಿನಿಕ್‌ನಲ್ಲಿ ಐದು ಪ್ರಕರಣಗಳು ಹಾಗೂ ಬನ್ನೇರುಘಟ್ಟದ ಅಪೋಲೊ ಆಸ್ಪತ್ರೆಯಲ್ಲಿ ಮೂರು ಪ್ರಕರಣಗಳನ್ನು ಗುರುತಿಸಲಾಗಿದೆ. 

‘ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ದೇಹದಲ್ಲಿ ಅಭಿವೃದ್ಧಿಹೊಂದುವ ಪ್ರತಿಕಾಯಗಳು ಉರಿಯೂತಕ್ಕೆ ಕಾರಣವಾಗುವ ಸಾಧ್ಯತೆಯಿರುತ್ತದೆ. ಇದು ಕಾಲು ಬೆರಳು ಹಾಗೂ ಕೈಗಳಲ್ಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. 5ರಿಂದ 11 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಗ್ರೋಯಿಂಗ್ ಅಪ್ ಚಿಲ್ಡ್ರನ್ಸ್ ಕ್ಲಿನಿಕ್‌ನ ಮಕ್ಕಳ ತಜ್ಞ ಡಾ. ಶ್ರೀನಾಥ್ ಎಸ್. ತಿಳಿಸಿದರು. 

‘ಕೋವಿಡ್‌ನಿಂದ ಚೇತರಿಸಿಕೊಂಡ ಮೂರರಿಂದ ಆರು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಂಡಿವೆ. ಸಮಸ್ಯೆ ಎದುರಿಸುತ್ತಿದ್ದ ಮಕ್ಕಳ ಕೈಗಳು ಹಾಗೂ ಕಾಲಿನ ಪಾದಗಳು ತಣ್ಣಗಾಗಿದ್ದವು. ಆದರೆ, ಯಾವುದೇ ನೋವನ್ನು ಅವರು ಎದುರಿಸುತ್ತಿರಲಿಲ್ಲ’ ಎಂದು ಅಪೋಲೊ ಆಸ್ಪತ್ರೆಯ ಡಾ. ಪ್ರಶಾಂತ್ ಎಸ್. ಅರಸ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು