ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ ಇಂದು, ನಾಳೆ

Last Updated 27 ಸೆಪ್ಟೆಂಬರ್ 2021, 19:23 IST
ಅಕ್ಷರ ಗಾತ್ರ

ಬೆಂಗಳೂರು: ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ನಗರದ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಮತ್ತು ಬುಧವಾರ ವಿದ್ಯುತ್‌ ವ್ಯತ್ಯಯವಾಗಲಿದೆ.

ಭೂಗತ ಕೇಬಲ್‌ ಅಳವಡಿಸುವ ಕಾರ್ಯ ಕೈಗೊಂಡಿರುವುದರಿಂದ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಆರ್‌.ಆರ್‌. ನಗರ, ವಿಡಿಯಾ, ನೆಲಗೆದರನಹಳ್ಳಿ, ಬ್ಯಾಡರಹಳ್ಳಿ, ಶ್ರೀಗಂಧಕಾವಲ್‌, ವಿಜಯನಗರ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ವ್ಯತ್ಯಯವಾಗಲಿದೆ.

ಸ್ಥಳಗಳು: ಭೂಮಿಕಾ ಲೇಔಟ್‌, ಪಟ್ಟಣಗೆರೆ, ಬಿಎಚ್‌ಇಎಲ್‌ ಲೇಔಟ್‌, ಮಾರಪ್ಪ ಲೇಔಟ್‌, ಆಂಧ್ರಹಳ್ಳಿ ಸರ್ಕಾರಿ ಶಾಲೆ, ಆಂಧ್ರಹಳ್ಳಿ ಸರ್ಕಲ್‌, ಮಾರುತಿ ನಗರ ಬಿಡಬ್ಲ್ಯೂಎಸ್‌ಎಸ್‌ಬಿ, ಲಕ್ಷ್ಮಣ್ ನಗರ, ಸಂಜೀವಿನಿ ನಗರ, ವಿಘ್ನೇಶ್ವರ ನಗರ, ಹೆಗ್ಗನಹಳ್ಳಿ, ಹೆಗ್ಗನಹಳ್ಳಿ ಕ್ರಾಸ್‌, ಸುಂಕದಕಟ್ಟೆ, ಪೈಪ್‌ಲೈನ್‌ ರೋಡ್‌ ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ, ಕೆಜಿಎಚ್‌ಎಸ್‌ ಲೇಔಟ್‌, ಪಾಪರೆಡ್ಡಿ ಪಾಳ್ಯ, ಕೆ.ಕೆ. ಲೇಔಟ್‌, ಬಿನ್ನಿ ಲೇಔಟ್‌, ಜಯಲಕ್ಷ್ಮಮ್ಮ ಲೇಔಟ್‌ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ರಾಜಾನುಕುಂಟೆ ಮತ್ತು ಕೆಎಚ್‌ಬಿ ಕಾಲೊನಿಯ ಕೇಂದ್ರ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ರಾಜಾನುಕುಂಟೆ, ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ಅದ್ದಿಗನಹಳ್ಳಿ, ಸಾದೇನಹಳ್ಳಿ, ಸುರದೇನಪುರ, ಮಾರಸಂದ್ರ, ಅದ್ದೆ ವಿಶ್ವನಾಥಪುರ, ಹನಿಯೂರು, ಚಳ್ಳಹಳ್ಳಿ, ಕಾಕೋಳು, ಸೊನ್ನೇನಹಳ್ಳಿ, ಕರ್ಲಾಪುರ, ದಿಬ್ಬೂರು, ಶಾನುಭೋಗನಹಳ್ಳಿ, ಅರಕೆರೆ, ಬೈರಾಪುರ, ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ಚಿಕ್ಕಬೊಮ್ಮಸಂದ್ರ, ಶಾರದಾನಗರ, ಬಿ ಸೆಕ್ಟರ್‌, ಚಿಕ್ಕಮುನಿಯಪ್ಪ ಲೇಔಟ್‌, ಅಲ್ಲಸಂದ್ರ, ಜಿಕೆವಿಕೆ ಲೇಔಟ್‌, ಕೈಗಾರಿಕಾ ಪ್ರದೇಶ, ರಾಮಗೊಂಡನಹಳ್ಳಿ, ಐವಿಆರ್‌ಐ ರಸ್ತೆ, ಪುಟ್ಟೇನಹಳ್ಳಿ, ಕೆಎಚ್‌ಬಿ ಕಾಲೊನಿ, ಸುರಭಿ ಲೇಔಟ್‌, ರೈತರ ಸಂತೆ, ಶಿವನಹಳ್ಳಿ, ಗಾಂಧಿನಗರ, ಬಿ.ಬಿ. ರಸ್ತೆ, ಯಲಹಂಕ ಓಲ್ಡ್‌ ಟೌನ್‌ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಣ್ಣೂರು ಉಪ-ಕೇಂದ್ರ ವ್ಯಾಪ್ತಿಯಲ್ಲಿ ಬುಧವಾರ ವಿದ್ಯುತ್‌ ಸ್ಥಗಿತ: 66/11 ಕೆ.ವಿ ಹೆಣ್ಣೂರು ಉಪ-ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತ ಜಯಂತಿ ಕಾಲೇಜು, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‍ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‍ಶಿಪ್, ನಗರಗಿರಿ ಟೌನ್‍ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲಹಳ್ಳಿ, ಮಂತ್ರಿ ಅಪಾರ್ಟ್‍ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿಎಚ್‌ಕೆ ಇಂಡಸ್ಟ್ರೀಸ್, ಜಾನಕಿ ರಾಮ್ ಲೇಔಟ್, ವಡ್ಡರ ಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಬೈರತಿ ಹಳ್ಳಿ, ಕೆಆರ್‌ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಂ ಎನ್‍ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೊನಿ ಮಂಜುನಾಥ್ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಟಾಲಮ್ಮ ದೇವಸ್ಥಾನ, ಎ.ಕೆ.ಆರ್ ಸ್ಕೂಲ್ ಹೊಸ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಸೋಲದೇವನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ 10ರಿಂದ 4ರವರೆಗೆ ವಿದ್ಯುತ್‌ ಸ್ಥಗಿತವಾಗಲಿದೆ.

ಐಐಎಚ್‌ಆರ್‌, ಕುಂಬಾರಹಳ್ಳಿ, ಕಸಘಟ್ಟಪುರ, ಕೆಂಪಾಪುರ, ದೊಡ್ಡಬ್ಯಾಲದಕೆರೆ, ಮೇಡಿಅಗ್ರಹಾರ, ಶಿವಕೋಟೆ, ಕೊಂಡಶೆಟ್ಟಿಹಳ್ಳಿ, ಕುರುಬರಹಳ್ಳಿ, ಚಿಕ್ಕಬ್ಯಾಲದಕೆರೆ, ಹುರುಳಿಚಿಕ್ಕನಹಳ್ಳಿ, ಲಿಂಗನಹಳ್ಳಿ, ಮಾದಪ್ಪನಹಳ್ಳಿ ಮುಂತಾದ ಸುತ್ತಮುತ್ತ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT