ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಿಜ್‌: ಅಂತಿಮ ಸುತ್ತಿಗೆ ಸಿದ್ಧತೆ

Last Updated 23 ಜನವರಿ 2020, 22:17 IST
ಅಕ್ಷರ ಗಾತ್ರ

ಬೆಂಗಳೂರು:‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ 6ನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಅಂತಿಮ ಸುತ್ತಿನ ಸ್ಪರ್ಧೆ ಇದೇ 30ರಂದು ನಡೆಯಲಿದ್ದು, ನಗರದ ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ.

ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಂದು ಬೆಳಿಗ್ಗೆಬೆಂಗಳೂರು ವಲಯದ ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.ಮಧ್ಯಾಹ್ನದ ನಂತರ ಅಂತಿಮ ಸುತ್ತಿನ ಕ್ವಿಜ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಬೆಂಗಳೂರು ವಲಯ ಸೇರಿದಂತೆ ಒಟ್ಟು 12 ವಲಯಗಳಿಂದ ವಿಜೇತರಾದ ತಲಾ ಇಬ್ಬರು ಅಂತಿಮ ಹಣಾಹಣಿಯಲ್ಲಿ ತಮ್ಮಬೌದ್ಧಿಕ ಕಸರತ್ತು ತೋರಿಸಲಿದ್ದಾರೆ.

ಅಂದು ಬೆಳಿಗ್ಗೆ8.30ರಿಂದ ನೋಂದಣಿ ಆರಂಭವಾಗುತ್ತದೆ. ಬೆಳಿಗ್ಗೆ ಬೆಂಗಳೂರು ವಲಯದ ಕ್ವಿಜ್‌ ಚಾಂಪಿಯನ್‌ಷಿಪ್‌ ನಡೆದು ಮಧ್ಯಾಹ್ನದ ವೇಳೆಗೆ ಅದು ಕೊನೆಗೊಳ್ಳುತ್ತದೆ. ನಂತರ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆಮೈಸೂರು, ಹಾಸನ, ಉಡುಪಿ, ಮಡಿಕೇರಿ, ಮಂಗಳೂರು, ದಾವಣಗೆರೆ, ಧಾರವಾಡ, ಜಮಖಂಡಿ ಹಾಗೂ ಕಲಬುರ್ಗಿಗಳಲ್ಲಿಕ್ವಿಜ್‌ ನಡೆದಿದ್ದು, ರಾಯಚೂರು ಹಾಗೂ ತುಮಕೂರಿನಲ್ಲಿ ಸ್ಪರ್ಧೆಗಳು ನಡೆಯಲಿವೆ.

ವಿಜೇತ ತಂಡಕ್ಕೆ ₹ 50 ಸಾವಿರ ನಗದು ಬಹುಮಾನ ಇದೆ. 2ನೇ ಬಹುಮಾನ ₹ 30 ಸಾವಿರ, 3ನೇ ಬಹುಮಾನ ₹ 10 ಸಾವಿರ, 4ನೇ ಬಹುಮಾನ ₹ 6 ಸಾವಿರ, 5ನೇ ಬಹುಮಾನ ₹ 4 ಸಾವಿರ ಇದೆ.

10ನೇ ತರಗತಿವರೆಗಿನ ವಿದ್ಯಾರ್ಥಿ
ಗಳು ಸ್ಪರ್ಧೆಯಲ್ಲಿ ‍‍ಪಾಲ್ಗೊಳ್ಬಹುದು. ಬೆಂಗಳೂರು ನಗರ ವ್ಯಾಪ್ತಿಯ ಶಾಲೆಗಳು ಸ್ಪರ್ಧೆಯ ಬಗ್ಗೆ ಮಾಹಿತಿಗೆ 9606912242, 97422
84543 ಸಂಪರ್ಕಿಸಬಹುದು.

ಶ್ರೀ ಶಿವ ದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್‌, ಬಿಡದಿ ಇವರು ಆಹಾರ ವಿತರಣೆಯ ಪಾಲುದಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT