ಶುಕ್ರವಾರ, ಆಗಸ್ಟ್ 14, 2020
27 °C

ಚಿಕಿತ್ಸೆಗಾಗಿ ಅಲೆದಾಡಿದ ಗರ್ಭಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಜೆ. ಹಳ್ಳಿಯ ಸೋಂಕಿತ ಗರ್ಭಿಣಿಯೊಬ್ಬರ ಹೆರಿಗೆಗಾಗಿ ಆಕೆಯ ಕುಟುಂಬಸ್ಥರು 10 ಆಸ್ಪತ್ರೆಗಳಿಗೆ ಅಲೆದಾಡಿದರು.

ಶುಕ್ರವಾರ ರಾತ್ರಿ ಅವರಿಗೆ ಹೆರಿಗೆ ನೋವು ಆರಂಭವಾಗಿದ್ದು, ಆಂಬುಲೆನ್ಸ್‌ಗೆ ಕರೆ ಮಾಡಿದರೂ ಬರಲಿಲ್ಲ. ಬೆಳಿಗ್ಗೆ ಆಟೊರಿಕ್ಷಾದಲ್ಲಿ ಕಮ್ಮನಹಳ್ಳಿ, ನಾಗವಾರ, ಸಹಕಾರ ನಗರ, ವಿವೇಕನಗರ, ರಾಜಾಜಿನಗರ, ಕಲ್ಯಾಣನಗರ ಸೇರಿ ಹಲವು ಆಸ್ಪತ್ರೆಗಳನ್ನು ಸುತ್ತಿ ಸಂಬಂಧಿಕರು ವಿಚಾರಿಸಿದ್ದಾರೆ.

ಹಾಸಿಗೆ ಖಾಲಿ ಇಲ್ಲ ಎಂಬ ಕಾರಣಕ್ಕೆ ಎಲ್ಲಿಯೂ ಅವಕಾಶ ಸಿಗಲಿಲ್ಲ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಅಂಗಲಾಚಿ ಮಹಿಳೆಯನ್ನು ಅಲ್ಲಿ ದಾಖಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.