ಫಲಿತಾಂಶಕ್ಕೆ ಮೊದಲೇ ನೇಮಕಾತಿ ಪಟ್ಟಿ: ಆಕ್ಷೇಪ

7
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ

ಫಲಿತಾಂಶಕ್ಕೆ ಮೊದಲೇ ನೇಮಕಾತಿ ಪಟ್ಟಿ: ಆಕ್ಷೇಪ

Published:
Updated:

ಬೆಂಗಳೂರು: ಇತ್ತೀಚೆಗಷ್ಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿ ಪಟ್ಟಿಯ ಬಗ್ಗೆ ಸಾಕಷ್ಟು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡದೇ ನೇರವಾಗಿ ನೇಮಕಾತಿ ಪಟ್ಟಿ ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ’ ಎಂದು ಅಭ್ಯರ್ಥಿ ಮೇಘರಾಜ್ ಎಂಬುವವರು ಆರೋಪಿಸಿದರು.

‘ನೇಮಕಾತಿ ಪಟ್ಟಿಯಲ್ಲಿ ಕೇವಲ ಮೆರಿಟ್‌ ಅಂಕಗಳನ್ನು ಮಾತ್ರ ನೀಡಲಾಗಿದೆ. ಪದವಿ, ಬಿ.ಇಡಿ, ಟಿಇಟಿ, ಸಿಇಟಿ ಪರೀಕ್ಷೆಗಳಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದಾರೆ ಎಂಬುದು ಅದರಲ್ಲಿಲ್ಲ. ಕಟ್‌ ಆಫ್‌ ಅಂಕಗಳ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ’ ಎಂದರು.

‘ಪ್ರಶ್ನೆಪತ್ರಿಕೆ 2 ಮತ್ತು 3ರ ಕೀ ಉತ್ತರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವನ್ನು ಇಲಾಖೆ ತಿಳಿಸಿಲ್ಲ. ಹೀಗಾಗಿ ಸದ್ಯ ಬಿಡುಗಡೆ ಮಾಡಿರುವ 1:2 ಅನುಪಾತ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪದವಿ, ಬಿ.ಇಡಿ, ಟಿಇಟಿ ಹಾಗೂ ಸಿಇಟಿಯಲ್ಲಿ ಗಳಿಸಿದ ಅಂಕಗಳ ವಿವರಗಳನ್ನು ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.

‘ಪದವಿಯಲ್ಲಿ ನನಗಿಂತ ಕಡಿಮೆ ಅಂಕ ಪಡೆದವರೆಲ್ಲ ಆಯ್ಕೆಯಾಗಿದ್ದಾರೆ. ಎಲ್ಲಾ ಅಂಕಗಳನ್ನು ಪ್ರಕಟಿಸಿದ್ದರೆ, ಯಾವ ಮಾನದಂಡಗಳಿಂದ ಆಯ್ಕೆ ಮಾಡಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗುತ್ತಿತ್ತು’ ಎಂದು ತಿಳಿಸಿದರು. 

‘ಇದೇ ಮೊದಲ ಬಾರಿಗೆ ಲಿಖಿತ ಪರೀಕ್ಷೆ ನಡೆಸಲಾಗಿದೆ. ಹಾಗಾಗಿ ಎಷ್ಟು ಅಂಕಗಳು ಬಂದಿವೆ ಎಂಬುದನ್ನು ತಿಳಿದುಕೊಳ್ಳಬೇಕು. ವರ್ಷಗಳಿಂದ ಕಷ್ಟಪಟ್ಟು ತರಬೇತಿ ಪಡೆದು ನೇಮಕಾತಿಗಾಗಿ ಹಂಬಲಿಸುತ್ತಿರುತ್ತೇವೆ. ಹೀಗಾದಾಗ ನೋವಾಗುತ್ತದೆ’ ಎಂದು ಅವರು ಹೇಳಿದರು.

ಪದವಿಯಲ್ಲಿ ಶೇ 25, ಬಿ.ಇಡಿಯಲ್ಲಿ ಶೇ 25, ಟಿಇಟಿಯಲ್ಲಿ ಶೇ 15 ಹಾಗೂ ಸಿಇಟಿಯಲ್ಲಿ ಶೇ 35 ಪಡೆದಿರಬೇಕು ಎಂಬ ಮಾನದಂಡವಿದೆ. ವಿಜ್ಞಾನ ವಿಭಾಗದಲ್ಲಿ ಲಿಖಿತ ಪರೀಕ್ಷೆಯಲ್ಲಿ 150 ಅಂಕಗಳಿಗೆ 75 ಅಂಕಗಳನ್ನು ಗಳಿಸ
ಬೇಕಿದೆ. ಇದರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಕೇವಲ 20 ಮಂದಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !