ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನ: ಬಹುಮಾನ ವಿತರಣೆ

Published 28 ಜನವರಿ 2024, 0:21 IST
Last Updated 28 ಜನವರಿ 2024, 0:21 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ ಪುಷ್ಪ ಉದ್ಯಾನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಶನಿವಾರ ಬಹುಮಾನ ನೀಡಲಾಯಿತು.

ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಪರ್ಧೆಗಳು, ಇಕೆಬಾನ, ಪುಷ್ಪ ಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್‌ಆರ್ಟ್, ಜಾನೂ‌ರ್ ಬೋನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರು ಬಹುಮಾನ ಪಡೆದರು.

ಬಹುಮಾನ ವಿತರಿಸಿದ ನಟ ಅಶೋಕ್‌ ಮಾತನಾಡಿ, ‘1983ರಲ್ಲಿ ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರದಲ್ಲಿ ಬಸವಣ್ಣನ ಪಾತ್ರ ಮಾಡಿದ್ದೆ. ಅದುವೇ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು’ ಎಂದು ಹೇಳಿದರು.

‘ಉತ್ತರ ಕರ್ನಾಟಕದ ನನ್ನನ್ನು ಬಾಲ್ಯದಲ್ಲಿ ತಂದೆ ಇಲ್ಲಿನ ಫಲಪುಷ್ಪ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದಾಗ ವಿಸ್ಮಯಗೊಂಡಿದ್ದೆ’ ಎಂದು ಹಾಸ್ಯನಟ ಶರಣ್‌ ನೆನಪು ಮಾಡಿಕೊಂಡರು.

ಜನರು ಬೇರೆಲ್ಲೊ ಸ್ವರ್ಗವನ್ನು ಹುಡುಕುತ್ತಾರೆ. ಲಾಲ್‌ಬಾಗ್‌ಗೆ ಬಂದರೆ ಅದೇ ಸ್ವರ್ಗ. ಹಸಿರು ಇರುವಲ್ಲಿ ಜೀವ ಇರುತ್ತದೆ. ಹಸಿರಿನ ಬಗ್ಗೆ ಅರಿವು ಮೂಡಿಸಿಕೊಳ್ಳಲಾದರೂ ಆಗಾಗ ಇಂಥ ಜಾಗಗಳಿಗೆ ಬರಬೇಕು. ಲಾಲ್‌ಬಾಗ್‌ನ ಒಂದೊಂದು ಮರವೂ 200- 300 ವರ್ಷಗಳ ಕಾಲದ ಇತಿಹಾಸ ಹೇಳುತ್ತದೆ ಎಂದು ವಿಶ್ಲೇಷಿಸಿದರು.

ದೇಶಿ ಮತ್ತು ವಿದೇಶಿ ಹೂಗಳ ವಿಶೇಷ ಜೋಡಣೆ, ವರ್ಟಿಕಲ್ ಗಾರ್ಡನ್‌ ಪರಿಕಲ್ಪನೆ, ಅನುಭವ ಮಂಟಪದ ಪುಷ್ಪ ಪ್ರತಿರೂಪ ಅನಾವರಣ, ಐಕ್ಯಮಂಟಪದ ಪುಷ್ಪ ಪ್ರತಿರೂಪ ಅನಾವರಣ, ಆಕರ್ಷಕ ಹೂಕುಂಡಗಳಿಂದ ಹ್ಯಾಂಗಿಂಗ್‌ ಟ್ರಿ ಪರಿಕಲ್ಪನೆ, ಪುಷ್ಪ ಡೂಮ್ಸ್‌ ಅನಾವರಣ, ವಚನ ಪುಸ್ತಕ ಮಾರಾಟದ ವ್ಯವಸ್ಥೆ ಸಹಿತ ವಿವಿಧ ಪರಿಕಲ್ಪನೆಗಳನ್ನು ನೀಡಿ ಸಹಕರಿಸಿದವರನ್ನು ಗೌರವಿಸಲಾಯಿತು.

ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಿ.ಎಸ್. ರಮೇಶ್ ಹಾಜರಿದ್ದರು.

ಇಂದು ಕೊನೆ

ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜ.28ರಂದು ಕೊನೆಗೊಳ್ಳಲಿದೆ. 

ಗಣರಾಜ್ಯೋತ್ಸವದ ದಿನವಾದ ಶುಕ್ರವಾರ ‍ಪ್ರದರ್ಶನ ವೀಕ್ಷಿಸಲು ಲಕ್ಷಕ್ಕೂ ಅಧಿಕ ಜನರು ಬಂದಿದ್ದರು. ಜನದಟ್ಟಣೆ  ಉಂಟಾಗಿತ್ತು. ಶನಿವಾರ ದಟ್ಟಣೆ ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT