ಬಿಳಿನಾಗರ ಮರಿ ರಕ್ಷಣೆ

7
ನಗರದ ಗೋಕುಲ ಬಡಾವಣೆಯಲ್ಲಿ ಪತ್ತೆ

ಬಿಳಿನಾಗರ ಮರಿ ರಕ್ಷಣೆ

Published:
Updated:
ನಗರದಲ್ಲಿ ಸೋಮವಾರ ರಕ್ಷಿಸಿದ ಬಿಳಿನಾಗರ ಮರಿ

ಬೆಂಗಳೂರು: ನಗರದಲ್ಲಿ ಮೊದಲ ಬಾರಿಗೆ ಬಿಳಿ ನಾಗರ ಮರಿಯನ್ನು ರಕ್ಷಿಸಲಾಗಿದೆ. ಮತ್ತಿಕೆರೆ ಬಳಿಯ ಗೋಕುಲ ಬಡಾವಣೆಯಲ್ಲಿ ಕಂಡ ಹಾವನ್ನು ಉರಗ ರಕ್ಷಕರಾದ ರಾಜೇಶ್‌ ಕುಮಾರ್‌ ಮತ್ತು ವಿವೇಕ್‌ ಅರಸು ಅವರು ರಕ್ಷಿಸಿದರು. ಹಾವಿನ ಮರಿ ಜನಿಸಿ ಕೇವಲ ಎರಡು ದಿನಗಳಾಗಿದ್ದವು. 

‘ನಾಗರಹಾವುಗಳನ್ನು ಬೇಸಿಗೆ ಹಾಗೂ ಮಳೆಗಾಲದಲ್ಲಿ ರಕ್ಷಿಸುವುದು ಸಾಮಾನ್ಯ ಸಂಗತಿ. ಆದರೆ, ಮೊದಲ ಬಾರಿಗೆ ಬಿಳಿ ನಾಗರ ಮರಿ ರಕ್ಷಿಸಿದ್ದೇವೆ. ಅದರ ಆವಾಸಸ್ಥಾನಕ್ಕೆ ಮರಳಿ ಬಿಡಲಾಗಿದೆ’ ಎಂದು ರಾಜೇಶ್‌ ಹೇಳಿದರು. 

'ಬೇಸಿಗೆಯಲ್ಲಿ ಹೆಚ್ಚು ಹಾವುಗಳು ಸಂಗಾತಿಯನ್ನು ಹುಡುಕಿಕೊಂಡು ಹೊರಬರುತ್ತವೆ. ಮಳೆಗಾಲದಲ್ಲಿ ಇಂಥ ಮರಿಗಳು, ಮರಿ ಹಾವುಗಳು ಹೊಸ ಪ್ರದೇಶವನ್ನು ಹುಡುಕಿಕೊಂಡು ಹೋಗುತ್ತವೆ' ಎಂದು ಅವರು ಹೇಳಿದರು.

ನಗರದಲ್ಲಿ ಹಾವು ರಕ್ಷಿಸುವ 23 ಸ್ವಯಂ ಸೇವಕರು ಇದ್ದಾರೆ. ಹಾವು ಸಂರಕ್ಷಣೆ ಸಂಬಂಧಿಸಿ ಪ್ರತಿಯೊಬ್ಬರೂ ಪ್ರತಿದಿನ ಸರಾಸರಿ 6 ಕರೆಗಳನ್ನಾದರೂ ಸ್ವೀಕರಿಸುತ್ತಾರೆ. ನಗರದಲ್ಲಿ ಈ ಹಿಂದೆ 26ಕ್ಕೂ ಅಧಿಕ ಜಾತಿಯ ವಿವಿಧ ಹಾವುಗಳು ಇದ್ದವು. ಈಗ ಅವುಗಳ ಸಂತತಿ ಗಣನೀಯವಾಗಿ ಕ್ಷೀಣಿಸಿದೆ ಎಂದು ಅರಸು ಹೇಳಿದರು.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !