ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಚಳವಳಿಗೆ ಜಯ: ಐಸಾ ಸಂಭ್ರಮಾಚರಣೆ 

Last Updated 20 ನವೆಂಬರ್ 2021, 21:36 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿರೈತರು ನಡೆಸಿದ ಚಳವಳಿಗೆ ಗೆಲುವು ಸಿಕ್ಕಿರುವ ಸಂಭ್ರಮದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಐಸಾ) ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿಶನಿವಾರವಿಜಯ ಜಾಥಾ ನಡೆಸಿದರು.

ರೈತ ಚಳವಳಿಯಲ್ಲಿ ಮೃತಪಟ್ಟ ರೈತರಿಗೆಕ್ರಾಂತಿಗೀತೆಗಳ ಮೂಲಕ ಗೌರವ ಸೂಚಿಸಲಾಯಿತು. ಘೋಷವಾಕ್ಯಗಳ ಮೂಲಕ ರೈತರ ಹೋರಾಟವನ್ನು ಸ್ಮರಿಸಲಾಯಿತು.

ಸಂಘಟನೆ ರಾಜ್ಯ ಸಂಚಾಲಕ ದೇವಯ್ಯ,‘ಹೋರಾಟದಲ್ಲಿದ್ದ ರೈತರ ಮೇಲೆ ಶೋಷಣೆ ನಡೆಸಿದ ಮೋದಿ ಸರ್ಕಾರ ಕ್ಷಮಾಪಣೆ ಕೇಳಬೇಕು. ರಾಜ್ಯದಲ್ಲಿ ಜಾರಿಯಲ್ಲಿರುವ ರೈತ-ವಿರೋಧಿ ಕಾಯ್ದೆಗಳನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು.ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪಡೆಯುವುದನ್ನುಕಾನೂನಾತ್ಮಕ ಹಕ್ಕಾಗಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT