ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಯ ಪರಿಪಾಲನೆ: ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ!

Published 17 ಅಕ್ಟೋಬರ್ 2023, 20:17 IST
Last Updated 17 ಅಕ್ಟೋಬರ್ 2023, 20:17 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಮೂರು ತಿಂಗಳಿನಿಂದ ವಿಶ್ವದ ಅತ್ಯಂತ ಸಮಯದ ಪರಿಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಸಿರಿಯಮ್‌ನ 'ದಿ ಆನ್-ಟೈಮ್ ಫಾರ್ಮೆನ್ಸ್ ಮಾಸಿಕ ವರದಿ' ತಿಳಿಸಿದೆ.

ಜುಲೈ ತಿಂಗಳಿನಲ್ಲಿ ಶೇ87.51ರಷ್ಟು ಸಮಯಪಾಲನೆ, ಆಗಸ್ಟ್‌ನಲ್ಲಿ ಶೇ89.66 ಮತ್ತು ಸೆಪ್ಟೆಂಬರ್‌ನಲ್ಲಿ ಶೇ88.51 ಸಮಯ ಪರಿಪಾಲನೆ ಮಾಡಿದೆ ಎಂದು ಬಿಐಎಎಲ್ ಮಂಗಳವಾರ ತಿಳಿಸಿದೆ.

ವರದಿ ಪ್ರಕಾರ, ಆನ್-ಟೈಮ್ ನಿರ್ಗಮನ ಶ್ರೇಯಾಂಕ ನಿಗದಿತ ಸಮಯದ 15 ನಿಮಿಷಗಳೊಗೆ ನಿರ್ಗಮಿಸಿದ ವಿಮಾನಗಳ ಶೇಕಡಾವಾರು ಸಂಖ್ಯೆ ಅಳೆಯಲಾಗುವುದು ಎಂದು ವರದಿ ಹೇಳಿದೆ.

3.1 ಕೋಟಿ ಪ್ರಯಾಣಿಕರು : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 88 ಮಾರ್ಗಗಳನ್ನು ಒಳಗೊಂಡಿರುವ ನೆಟ್‌ವರ್ಕ್ ಮತ್ತು 35 ಏರ್‌ಲೈನ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. 2022-23ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ 31.91 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮೂಲಕ ಭಾರತದ ಮೂರನೇ ಅತ್ಯಂತ ಹೆಚ್ಚು ಪ್ರಯಾಣಿಕರನ್ನು ಹೊಂದಿದ ವಿಮಾನ ನಿಲ್ದಾಣ ಎನಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT