ರೈಲ್ವೆ ಕೆಲಸದ ಆಮಿಷವೊಡ್ಡಿ ₹ 10 ಲಕ್ಷ ವಂಚನೆ
ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ‘ಸಿ’ ಹಾಗೂ ‘ಡಿ’ ದರ್ಜೆ ಕೆಲಸ ಕೊಡಿಸುವುದಾಗಿ ಹೇಳಿ ₹ 10 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾಗಿರುವ ಹುಬ್ಬಳ್ಳಿ ನಿವಾಸಿ ಅನಿಲ್ ಕುಮಾರ್ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ದಿಲೀಪ್ ಅಡಿವೆಪ್ಪ ಗಸ್ತಿ (40) ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸ್ನೇಹಿತರೊಬ್ಬರ ಮೂಲಕ 2017ರಲ್ಲಿ ಅನಿಲ್ಕುಮಾರ್ ಅವರಿಗೆ ಆರೋಪಿ ದಿಲೀಪ್ ಪರಿಚಯವಾಗಿತ್ತು. ರೈಲ್ವೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ನನಗೆ ಪರಿಚಯವೆಂದು ಹೇಳಿದ್ದ ಆರೋಪಿ, ₹ 10 ಲಕ್ಷ ಕೊಟ್ಟರೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಅದನ್ನು ನಂಬಿದ್ದ ಅನಿಲ್ಕುಮಾರ್, ಹಂತ ಹಂತವಾಗಿ ಆರೋಪಿಗೆ ಹಣ ನೀಡಿದ್ದರು’ ಎಂದೂ ತಿಳಿಸಿವೆ.
‘ಹಣ ಪಡೆದರೂ ಆರೋಪಿ ಕೆಲಸ ಕೊಡಿಸಿರಲಿಲ್ಲ. ಹಣವನ್ನೂ ವಾಪಸು ನೀಡಿರಲಿಲ್ಲ. ನೊಂದ ಅನಿಲ್ಕುಮಾರ್ ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.