ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳ ನಿಗಾಕ್ಕೆ ಸಂಪರ್ಕರಹಿತ ವ್ಯವಸ್ಥೆ

Last Updated 24 ನವೆಂಬರ್ 2022, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ವೈಟಲ್ಸ್ ಮಾನಿಟರಿಂಗ್ ತಂತ್ರಜ್ಞಾನದ (ಡೋಝಿ) ಮೂಲಕ ರೋಗಿಗಳ ರಕ್ತದೊತ್ತಡ, ಹೃದಯ ಬಡಿತ, ಇಸಿಜಿ ಹಾಗೂ ಚರ್ಮದ ಉಷ್ಣತೆ ಬಗ್ಗೆ ನಿಗಾ ಇಡುವಸಂಪರ್ಕರಹಿತ ವ್ಯವಸ್ಥೆಯನ್ನುರಾಮಯ್ಯ ಸ್ಮಾರಕ ಆಸ್ಪತ್ರೆ ಅಳವಡಿಸಿಕೊಂಡಿದೆ.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಅಧ್ಯಕ್ಷ ಡಾ.ಕೆ.ಸಿ.ಗುರುದೇವ್, ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿಂದ ರೋಗಿಯ ಮೇಲೆ ಪ್ರತಿ ಕ್ಷಣ ನಿಗಾ ಇಡಲಾಗುತ್ತದೆ.ಶೀಟ್ ಮಾದರಿಯ ಸಾಧನವನ್ನು ಹಾಸಿಗೆಯ ಕೆಳಭಾಗದಲ್ಲಿ ಅಳವಡಿಸಲಾಗುತ್ತದೆ. ಇದು ರೋಗಿಗಳ ಗಮನಕ್ಕೂ ಬರುವುದಿಲ್ಲ. ಮೊಬೈಲ್ ಆ್ಯಪ್‌ ನೆರವಿನಿಂದ ವೈದ್ಯರು ತಾವಿದ್ದಲ್ಲೇ ರೋಗಿಯ ಆರೋಗ್ಯದ ಬಗ್ಗೆ ತಿಳಿಯಬಹುದು’ ಎಂದರು.

‘ರೋಗಿಯ ಆರೋಗ್ಯದಲ್ಲಿ ಏರುಪೇರಾದರೆಈ ವ್ಯವಸ್ಥೆಯು ತಕ್ಷಣ ವೈದ್ಯರಿಗೆ ಸಂದೇಶ ರವಾನಿಸುತ್ತದೆ. ಈ ಹಿಂದೆಯೂ ಕೆಲವರ ಆರೋಗ್ಯದಲ್ಲಿ ಏರುಪೇರಾದಾಗಈ ತಂತ್ರಜ್ಞಾನವು ಅವರನ್ನು ಕಾಪಾಡಲು ನೆರವಾಗಿದೆ. ಶುಶ್ರೂಷಕರು ನಿಮಿಷ ನಿಮಿಷಕ್ಕೂ ರೋಗಿಗಳ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಪ್ರಸ್ತುತ 60 ಹಾಸಿಗೆಗಳಿಗೆ ಈ ವ್ಯವಸ್ಥೆ ಅಳವಡಿಸಿದ್ದೇವೆ. ಮುಂದೆ ತೀವ್ರ ನಿಗಾ ಘಟಕವಲ್ಲದೇ, ಇತರ ಹಾಸಿಗೆಗಳಿಗೂ ಈ ಸಾಧನ ಅಳವಡಿಸಲಾಗುವುದು’ ಎಂದು ಹೇಳಿದರು.

ಡೋಝಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುದಿತ್ ದಂಡ್ವಾಟೆ, ‘ರಾಮಯ್ಯ ಸ್ಮಾರಕ ಆಸ್ಪತ್ರೆಯು ಡೋಝಿ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಈ ತಂತ್ರಜ್ಞಾನವು ಹಕ್ಕುಸ್ವಾಮ್ಯ ಹೊಂದಿದ್ದು, ಭಾರತದಲ್ಲಿ ತಯಾರಿಸಿದಂಥದ್ದಾಗಿದೆ. ರೋಗಿಗಳ ಸುರಕ್ಷತೆ ಹೆಚ್ಚಿಸಲು, ವೈದ್ಯಕೀಯ ಫಲಿತಾಂಶ ಮತ್ತು ಆರೈಕೆಯ ದಕ್ಷತೆ ಸುಧಾರಿಸಲು ಈ ತಂತ್ರಜ್ಞಾನ ಸಹಕಾರಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT