ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್ ಮಾದರಿಯಲ್ಲಿ ರಾಮನವಮಿ ಸಂಗೀತೋತ್ಸವ

ಒಂದು ತಿಂಗಳು ಸಂಗೀತ ಪ್ರೇಮಿಗಳಿಗೆ ರಸದೌತಣ
Last Updated 17 ಫೆಬ್ರುವರಿ 2021, 22:32 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀ ರಾಮ ಸೇವಾ ಮಂಡಳಿಯು ಏ.13ರಿಂದ ಮೇ 13ರವರೆಗ 83ನೇಯ ಶ್ರೀರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವನ್ನು ಹಮ್ಮಿಕೊಂಡಿದೆ. ಕೋವಿಡ್‌ ಕಾರಣ ಈ ಬಾರಿ ಸಂಗೀತೋತ್ಸವವು ವರ್ಚುವಲ್ ಮಾದರಿಯಲ್ಲಿ ನಡೆಯಲಿದೆ.

ಚಾಮರಾಜಪೇಟೆಯ ಹಳೆ ಕೋಟೆ ಶಾಲಾ ಮೈದಾನದಲ್ಲಿ ಸಂಗೀತೋತ್ಸವ ನಡೆಯಲಿದ್ದು, ಸೀಮಿತ ಸದಸ್ಯರಿಗೆ ಮಾತ್ರ ಅಲ್ಲಿ ಅವಕಾಶ ಇರುತ್ತದೆ. ಉಳಿದವರು ಆನ್‌ಲೈನ್ ವೇದಿಕೆಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಮಂಡಳಿಯ 2020ನೇ ಸಾಲಿನ ‘ರಾಮಗಾನ ಕಲಾಚಾರ್ಯ ಪ್ರಶಸ್ತಿ’ಯನ್ನು ಕಲಾವಿದರಾದ ರಂಜನಿ ಮತ್ತು ಗಾಯತ್ರಿ ಸಹೋದರಿಯರು ಹಾಗೂ ಮಲ್ಲಾಡಿ ಸಹೋದರರಿಗೆ ನೀಡುತ್ತಿದೆ. ಎಸ್‌.ವಿ. ನಾರಾಯಣಸ್ವಾಮಿ ರಾಯರ ನೆನಪಿನಲ್ಲಿ ಸ್ಥಾಪಿಸಲಾದ ‘ಎಸ್‌.ವಿ. ನಾರಾಯಣಸ್ವಾಮಿ ಗ್ಲೋಬಲ್ ಅವಾರ್ಡ್‌ ಫಾರ್ ಮ್ಯೂಸಿಕ್ ಪ್ರಶಸ್ತಿ’ಯನ್ನು ಕೌಷಿಕಿ ಚಕ್ರಭರ್ತಿ ಅವರಿಗೆ ನೀಡಿ, ಸನ್ಮಾನಿಸಲಾಗುತ್ತದೆ.

ರಾಮೋತ್ಸವದ ವಿಶೇಷ ಚಪ್ಪರದ ಗುದ್ದಲಿ ಪೂಜೆಯು ಇದೇ 22ರಂದು ಬೆಳಿಗ್ಗೆ 10.45ಕ್ಕೆ ಕೋಟೆ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಸಂಗೀತೋತ್ಸವದಲ್ಲಿ ವಿಜಯ ಪ್ರಕಾಶ್, ಎಂ.ಎಸ್. ಶೀಲಾ, ಸಿಕ್ಕಿಲ್ ಗುರುಚರಣ್, ವಿಶ್ವ ಮೋಹನ್ ಭಟ್, ಪ್ರವೀಣ್ ಗೋಡ್ಖಿಂಡಿ, ಮ್ಯಾಂಡೋಲಿನ್ ಯು. ರಾಜೇಶ್, ಮಲ್ಲಾಡಿ ಸಹೋದರರು, ನಿರುಪಮಾ ರಾಜೇಂದ್ರ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ ಎಂದು ಮಂಡಳಿಯ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಎಸ್‌.ಎನ್. ವರದರಾಜು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಪಾಸ್‌ ಬುಕ್ಕಿಂಗ್ ಮಾಡಲು: www.ramanavamitickets.com

ಆನ್‌ಲೈನ್ ಟಿಕೆಟ್‌ ಖರೀದಿಗೆ: www.shaale.com/watch/ramanavami

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT