ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಯ್ಯ ವಿ.ವಿ: 1,866 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Last Updated 17 ಫೆಬ್ರುವರಿ 2023, 5:29 IST
ಅಕ್ಷರ ಗಾತ್ರ

ಬೆಂಗಳೂರು: ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ನಗರದಲ್ಲಿ ಆಯೋಜಿಸಿದ್ದ 7ನೇ ಘಟಿಕೋತ್ಸವದಲ್ಲಿ 1,866 ವಿದ್ಯಾರ್ಥಿಗಳಿಗೆ ಪದವಿ ಹಾಗೂ 14 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ, ಒಬ್ಬರಿಗೆ ಎಂ.ಫಿಲ್‌ ಮತ್ತು ಇನ್ನೊಬ್ಬರಿಗೆ ಎಂ.ಎಸ್ (ಸಂಶೋಧನೆ) ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.

ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ 34 ವಿದ್ಯಾರ್ಥಿಗಳಿಗೆ‘ಡಾ.ಎಂ.ಎಸ್. ರಾಮಯ್ಯ ಚಿನ್ನದ ಪದಕ’, 33
ವಿದ್ಯಾರ್ಥಿಗಳಿಗೆ ‘ವೆಂಕಟಮ್ಮ ರಾಮಯ್ಯ ಬೆಳ್ಳಿ ಪದಕ’ ಮತ್ತು ಅತ್ಯುತ್ತಮ ವಿದ್ಯಾರ್ಥಿ ಸಂಶೋಧನಾ ಪ್ರಬಂಧ ಮಂಡನೆಗಾಗಿ 9 ವಿದ್ಯಾರ್ಥಿಗಳಿಗೆ ‘ಗೌರಮ್ಮ ರಾಮಯ್ಯ ರಜತ ಪದಕ’ ಸಂದವು.

ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಜಿ. ಸತೀಶ್ ರೆಡ್ಡಿ ಮಾತನಾಡಿ, ‘ಘಟಿಕೋತ್ಸವ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಒಂದು ವಿಶಿಷ್ಟವಾದ ಘಟ್ಟವಾಗಿದೆ. ಇದು ಅಧ್ಯಾಪಕರು ಮತ್ತು ಕುಟುಂಬದ ಬೆಂಬಲದ ಫಲದ ಫಲಿತಾಂಶವಾಗಿದೆ. ಭಾರತದ ಸ್ವಾವಲಂಬನೆಯೂ ಪ್ರಪಂಚದ ಸಂತೋಷ, ಸಹಕಾರ ಮತ್ತು ಶಾಂತಿಯಲ್ಲಿ ಬೇರೂರಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಜೀವನವನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಮುಡಿಪಾಗಿಡಬೇಕು. ನಮ್ಮ ಪರಂಪರೆ ಬಗ್ಗೆ ಹೆಮ್ಮೆಪ
ಡುವುದರ ಜೊತೆಗೆ ಜಾಗತಿಕ ಸಾಮರಸ್ಯವನ್ನು ಸಾಧಿಸಲು ತಮ್ಮ ಕರ್ತವ್ಯಗಳನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.

ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಿ.ವಿ.ಯ ಕುಲಪತಿ ಡಾ.ಎಂ.ಆರ್. ಜಯರಾಂ ವಹಿಸಿದ್ದರು. ಉಪಕುಲಪತಿ ಪ್ರೊ. ಕುಲದೀಪ್ ಕುಮಾರ್ ರೈನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT