ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್‌ ಸಾಲ ತೀರಿಸಲು ಸಿದ್ಧ: ಮಲ್ಯ

Last Updated 10 ಡಿಸೆಂಬರ್ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಕಿಂಗ್‌ಫಿಷರ್‌ ಕಂಪನಿ ಮಾಡಿರುವ ಸಾಲ ತೀರಿಸಲು ಸಿದ್ಧರಿದ್ದೇವೆ. ಆದ್ದರಿಂದ ‌ಯುನೈಟೆಡ್‌ ಬ್ರೆವರೀಸ್ ಹೋರ್ಡಿಂಗ್ಸ್‌ ಲಿಮಿಟೆಡ್‌ ಕಂಪನಿ (ಯುಬಿಎಚ್‌ಎಲ್‌) ಮುಚ್ಚಿಸಬೇಡಿ’ ಎಂದು ವಿಜಯ್‌ ಮಲ್ಯ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

‘ಕಿಂಗ್‌ಫಿಷರ್‌ ಸಾಲ ವಸೂಲಿಗಾಗಿ ಬ್ಯಾಂಕ್‌ಗಳು ಹೂಡಿರುವ ದಾವೆ ಸಂಬಂಧ ಯುಬಿಎಚ್‌ಎಲ್‌ ಸಂಸ್ಥೆಯನ್ನು ಮುಚ್ಚಲು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶಿಸಿದೆ. ಈ ಆದೇಶದನ್ವಯ ಯಾವುದೇ ಕ್ರಮ ಕೈಗೊಳ್ಳಬಾರದು’ ಎಂದು ಕೋರಿ ವಿಜಯ್ ಮಲ್ಯ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಲ್‌. ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಮಲ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ‘ಯುಬಿಎಚ್ಎಲ್ ಹೊಂದಿರುವ ಆಸ್ತಿ ಹಾಗೂ ಷೇರುಗಳ ಮೌಲ್ಯ ₹ 15 ಸಾವಿರ ಕೋಟಿಯಷ್ಟು ಇದೆ. ಇದನ್ನು ಮಾರಾಟ ಮಾಡಿದರೆ ಕಿಂಗ್‌ಫಿಷರ್ ಮಾಡಿರುವ ಸಾಲ ತೀರಿಸಿದ ನಂತರವೂ ಮೂರೂವರೆ ಸಾವಿರ ಕೋಟಿ ರೂಪಾಯಿ ಉಳಿಯುತ್ತದೆ. ಉಳಿಯುವ ಹಣದಲ್ಲಿಯೇ ಯುಬಿಎಚ್‌ಎಲ್ ಕಂಪನಿ ನಡೆಸಬಹದು. ಹೀಗಾಗಿ ಯುಬಿಎಚ್‌ಎಲ್‌ ಕಂಪನಿ ಮುಚ್ಚಿಸುವ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿದರು.

‘ಆಸ್ತಿ ಮಾರಾಟ ಮಾಡಿ ಬರುವ ಹಣವನ್ನು ಕೋರ್ಟ್‌ನಲ್ಲಿ ಠೇವಣಿ‌ ಇರಿಸಲಾಗುವುದು. ಯುಬಿಎಚ್ಎಲ್ ಸಾಲ ತೀರಿಸುವ ಪ್ರಕ್ರಿಯೆಯನ್ನು ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT