ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಉದ್ಯಾನ: ವಲಯಗಳ ಪುನರ್ ವಿಂಗಡಣೆ

Last Updated 30 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ನಾಲ್ಕು ವಲಯಗಳನ್ನು ಅರಣ್ಯ ಇಲಾಖೆ ಪುನರ್ ವಿಂಗಡಣೆ ಮಾಡಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಒಟ್ಟು 26,902 ಹೆಕ್ಟೇರ್‌ ಪ್ರದೇಶವಿದ್ದು, 10 ಶಾಖೆ ಮತ್ತು 23 ಗಸ್ತುಗಳಲ್ಲಿ ಅರಣ್ಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ 55ರಷ್ಟು ಅಂದರೆ 15,706 ಹೆಕ್ಟೇರ್‌ ಪ್ರದೇಶ ಕೋಡಿಹಳ್ಳಿ ವಲಯದಲ್ಲೇ ಇದ್ದು, 5 ಶಾಖೆ ಮತ್ತು 9 ಗಸ್ತುಗಳನ್ನು ಹೊಂದಿದೆ. ಉಳಿದ ಶೇ 45ರಷ್ಟು ಪ್ರದೇಶ ಮೂರು ವಲಯಗಳಿಗೆ ಹಂಚಿಕೆಯಾಗಿತ್ತು.

ಈಗ ಮರು ಹಂಚಿಕೆ ಮಾಡಲಾಗಿದ್ದು, ಬನ್ನೇರುಘಟ್ಟ ವಲಯಕ್ಕೆ 5,480 ಹೆಕ್ಟೇರ್‌ ಪ್ರದೇಶ, 2 ಶಾಖೆ ಮತ್ತು 4 ಗಸ್ತುಗಳನ್ನು ನೀಡಲಾಗಿದೆ. ಆನೇಕಲ್ ವಲಯಕ್ಕೆ 4,482 ಹೆಕ್ಟೇರ್ ಪ್ರದೇಶ, 3 ಶಾಖೆ ಮತ್ತು 5 ಗಸ್ತುಗಳನ್ನು ಉಳಿಸಲಾಗಿದೆ. ಹಾರೋಹಳ್ಳಿ ವಲಯಕ್ಕೆ 7,690 ಹೆಕ್ಟೇರ್ ಪ್ರದೇಶ, 3 ಶಾಖೆ ಮತ್ತು 6 ಗಸ್ತುಗಳನ್ನು ನೀಡಲಾಗಿದೆ. ಕೋಡಿಹಳ್ಳಿ ವಲಯಕ್ಕೆ 9,250 ಹೆಕ್ಟೇರ್ ಪ್ರದೇಶ, 4 ಶಾಖೆ ಮತ್ತು 8 ಗಸ್ತುಗಳನ್ನು ಉಳಿಸಲಾಗಿದೆ.

ವನ್ಯಜೀವಿ– ಮಾನವ ಸಂಘರ್ಷ ತಡೆಯಲು, ಅರಣ್ಯ ರಕ್ಷಣೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಮರು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯ ಆರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ) ಆದೇಶದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT