ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ತಾರತಮ್ಯ ಬೇಡ

Last Updated 14 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರುಕಲ್ಯಾಣ ಕರ್ನಾಟಕದವರೇ ಆಗಬೇಕೋ ಅಥವಾ ಹೊರಗಿನವರು ಆಗಬೇಕೋ ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹೇಳಿದ್ದಾರೆ (ಪ್ರ.ವಾ., ನ. 13).

ಹಾಗೊಂದು ವೇಳೆ, ಕಲ್ಯಾಣ ಕರ್ನಾಟಕ ಅಥವಾ ರಾಜ್ಯದ ಇತರ ಭಾಗದವರು ಎಂದು ಗುರುತಿಸಿ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುವುದೇ ಆದರೆ, ಅಖಂಡ ಕರ್ನಾಟಕ ಎನ್ನುವ ಮಾತಿಗೆ ಅರ್ಥವಿರುತ್ತದೆಯೇ?

ಉತ್ತರದವರು, ದಕ್ಷಿಣದವರು ಎನ್ನುವ ತಾರತಮ್ಯ ಸರಿಯಲ್ಲ. ಸಮಗ್ರ ಕರ್ನಾಟಕದ ಪರವಾಗಿ ಹೇಳಿಕೆಗಳು ಬರಲಿ. ಅರ್ಹ ವ್ಯಕ್ತಿ ಯಾವುದೇ ಪ್ರದೇಶದವರಾಗಿದ್ದರೂ ಅವರು ಕರ್ನಾಟಕದವರೇ ಆಗಿರುತ್ತಾರಲ್ಲವೇ? ಸಾಹಿತ್ಯ ಸಮ್ಮೇಳನಗಳು ಯಾವುದೇ ಹಿತಾಸಕ್ತಿಗೆ ಒಳಗಾಗದೆ ಸ್ಥಿತಪ್ರಜ್ಞೆ ಕಾಯ್ದುಕೊಳ್ಳಲಿ.

–ಅಶ್ವತ್ಥ ಕಲ್ಲೇದೇವರಹಳ್ಳಿ,ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT