ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.30ರೊಳಗೆ ವರದಿ ಸಲ್ಲಿಸಲು ಸೂಚನೆ

ರೇರಾ: 1,437 ಡೆವಲಪರ್‌ಗಳಿಗೆ ನೋಟಿಸ್
Last Updated 4 ಡಿಸೆಂಬರ್ 2020, 7:16 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಲ್ಲಿ (ರೇರಾ) ನೋಂದಾಯಿಸಿಕೊಂಡರೂ ತ್ರೈಮಾಸಿಕ ವರದಿ ನೀಡದ 1,437 ಡೆವಲಪರ್‌ಗಳಿಗೆ ನೋಟಿಸ್‌ ನೀಡಿರುವ ಪ್ರಾಧಿಕಾರ, ಇದೇ 30ರೊಳಗೆ ವರದಿ ಸಲ್ಲಿಸಲು ಸೂಚಿಸಿದೆ.

‘ಮನೆಯೂ ಸಿಕ್ಕಿಲ್ಲ, ಮಾಹಿತಿಯೂ ಇಲ್ಲ’ ಶೀರ್ಷಿಕೆಯಡಿ ನ.30ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ವರದಿ ಸಲ್ಲಿಸದ ಡೆವಲಪರ್‌ಗಳ ಕುರಿತು ಬರೆಯಲಾಗಿತ್ತು.

‘ವರದಿ ಸಲ್ಲಿಸದ ಡೆವಲಪರ್‌ಗಳಿಗೆ ಈಗಾಗಲೇ ಮೂರು ಬಾರಿ ನೋಟಿಸ್‌ ನೀಡಲಾಗಿದೆ. 30ರೊಳಗೆ ವರದಿ ನೀಡದಿದ್ದರೆ, ನೋಂದಣಿ ಸಂಖ್ಯೆಯನ್ನು ರದ್ದು ಮಾಡುವುದರ ಜೊತೆಗೆ, ಯೋಜನಾ ವೆಚ್ಚದ ಶೇ 5ರಷ್ಟು ಮೊತ್ತದ ದಂಡವನ್ನು ವಿಧಿಸಲಾಗುತ್ತದೆ’ ಎಂದು ರೇರಾ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಎಚ್ಚರಿಸಿದ್ದಾರೆ.

‘ವರದಿ ನೀಡದ ಕಾರಣ ಯೋಜನೆಯ ಪ್ರಗತಿ ತಿಳಿಯುತ್ತಿಲ್ಲ. ಲೆಕ್ಕಪತ್ರಗಳ ಪರಿಶೀಲನೆಯೂ ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಗ್ರಾಹಕರಿಗೆ ಇದರಿಂದ ತೊಂದರೆಯಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ವರದಿ ನೀಡದ ಡೆವಲಪರ್‌ಗಳ ಪಟ್ಟಿಯನ್ನು ಪ್ರಾಧಿಕಾರದ ವೆಬ್‌ಪೋರ್ಟಲ್‌ rera.karnataka.gov.inನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT