ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾನಗರ ರಸ್ತೆ ಅವ್ಯವಸ್ಥೆ: ಜನರ ಆಕ್ರೋಶ

ಬಿಬಿಎಂಪಿ ರಸ್ತೆ ದುರಸ್ತಿ ಮಾಡುವುದಾದರೂ ಯಾವಾಗ: ನಾಗರಿಕರ ಪ್ರಶ್ನೆ
Last Updated 22 ಅಕ್ಟೋಬರ್ 2021, 16:59 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರದ 100 ಅಡಿ ರಸ್ತೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ನಾಗರಿಕರು ಸಾಮಾಜಿಕ ಜಾಲತಾಣ ‘ಕೂ’ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿರಾನಗರ 100 ಅಡಿ ರಸ್ತೆಯು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಗಳನ್ನು ಸಂಪರ್ಕಿಸುತ್ತದೆ. ಇದು ನಗರದ ಪ್ರಮುಖ ರಸ್ತೆಯಾಗಿದ್ದರೂ ದುರಸ್ತಿಗೆ ಕ್ರಮಕೈಗೊಂಡಿಲ್ಲ. ರಸ್ತೆಯು ಗುಂಡಿಗಳಿಂದ ಕೂಡಿದ್ದು, ಸಂಚರಿಸುವುದು ದುಸ್ತರವಾಗಿದೆ. ಈ ರಸ್ತೆಯಲ್ಲಿ ಕಚೇರಿಗೆ ಹೋಗುವುದೆಂದರೆ ನರಕಯಾತನೆ ಎಂದು ನಾಗರಿಕರು ಕಿಡಿಕಾರಿದ್ದಾರೆ.

'ಐ.ಟಿ ಕಂಪನಿಗಳೇ ಸಾಲು ಸಾಲು ಚಕ್ಕಳ ಮಕ್ಕಳ ಹಾಕಿ ಕೂತಂತಿರುವ ಇಂದಿರಾನಗರದ ರೋಡು ಮೈಕೈ ತೂತು ಮಾಡಿಕೊಂಡು ಸೊರಗಿ ಸತ್ತು ಹೋಗಿದೆ. ಅದರ ಅವಸ್ಥೆ ನೋಡಿದರೆ ಆ ರೋಡಿಗೆ ಜನ್ಮವಿತ್ತವರ ಮುಖ ನೋಡ್ಬೇಕಲ್ಲ ಅನ್ಸುತ್ತೆ. ಅದನ್ನ ಏನಾದ್ರು ಮಾಡ್ರಿ ರೀ ಶ್ರೀಮಾನ್ ಬೆಂಗಳೂರನವ್ರೆ! ಪಾಪ ಕೆಂಪೇಗೌಡ್ರು!' ಎಂದು ಸುನಿಲ್ ಎನ್ನುವವರು ‘ಕೂ’ ಮಾಡಿದ್ದಾರೆ.

'ಕಷ್ಟಕಷ್ಟ. ಬೆಂಗಳೂರಿನ ಇಂದಿರಾನಗರದ 100 ಅಡಿ ವರ್ತುಲ ರಸ್ತೆಯಲ್ಲಿ ಪ್ರಯಾಣ ದೇವರಿಗೂ ಬೇಡ. ಬಿಬಿಎಂಪಿ ರಸ್ತೆ ರಿಪೇರಿ ಮಾಡೋದಾದ್ರೂ ಯಾವಾಗ?' ಎಂದು ಗಣೇಶ್‌ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಇಂದಿರಾ ನಗರದ 100 ಅಡಿ ವರ್ತುಲ ರಸ್ತೆಯಲ್ಲಿ ಸಾಗುವುದು ಜೀವ ಪಣಕ್ಕಿಟ್ಟು ನಡೆಸುವ ಯಾವುದೇ ಸಾಹಸಮಯ ಪ್ರದರ್ಶನ ನೀಡುವ ಸ್ಟಂಟ್‌ಗಳಿಗೆ ಹೋಲಿಸಿದರೆ ಅದಕ್ಕಿಂತ ಕಡಿಮೆ ಅನುಭವನ್ನಂತೂ ನೀಡಲಾರದು. ನೀವೂ ಈ ಮಾರ್ಗದಲ್ಲಿ ಸಂಚರಿಸಿದ್ದರೆ ನಿಮ್ಮ ಅನಿಸಿಕೆ ಏನು' ಎಂದು ನರೇಶ್ ಅಭಿಪ್ರಾಯ ಹಂಚಿಕೊಳ್ಳುವಂತೆ ಕೇಳಿದ್ದಾರೆ.

‘ಕೊರೊನಾ ವೈರಸ್‌ ಕಾರಣಕ್ಕೆ ಜನರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗ ರಸ್ತೆ ಗುಂಡಿಗಳಿಂದ ಜನರು ಗಗನಯಾತ್ರಿಗಳ ಉಡುಪು ಧರಿಸುವ ಪರಿಸ್ಥಿತಿ ಸೃಷ್ಟಿಯಾಗಿದ್ದು, ಚಂದ್ರನ ಅಂಗಳದಲ್ಲಿ ನಡೆದಾಡುವಂತೆ ಹೆಜ್ಜೆ ಹಾಕಬೇಕಾಗಿದೆ’ ಎಂದು ಪ್ರದೀಪ್‌ ಎನ್ನುವವರು ‘ಕೂ’ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT