ಮಂಗಳವಾರ, ಜನವರಿ 28, 2020
19 °C
ಮಣಿಪಾಲ್‌ ಆಸ್ಪತ್ರೆಯ ವೈದ್ಯರ ಸಾಧನೆ

ಪಿತ್ತಜನಕಾಂಗ ಕಸಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘40 ವರ್ಷದ ವ್ಯಕ್ತಿಯೊಬ್ಬರಿಗೆ ನಗರದ ಮಣಿಪಾಲ್‌ ಆಸ್ಪತ್ರೆಯ ವೈದ್ಯರು ಪಿತ್ತಜನಕಾಂಗ ಕಸಿ ಸಲುವಾಗಿ ನಡೆಸಿದ ರೊಬೋಟಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ’ ಎಂದು ಆಸ್ಪತ್ರೆಯ ಪಿತ್ತ ಜನಕಾಂಗ ಸಲಹಾ ತಜ್ಞ ರವಿಚಂದ್‌ ಸಿದ್ಧಾಚಾರಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಗಿ ದೀರ್ಘಕಾಲದಿಂದ ಪಿತ್ತಜನಕಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಪಿತ್ತಜನಕಾಂಗ ಕಸಿ ಮಾಡುವುದು ಅನಿವಾರ್ಯವಾಗಿತ್ತು. 32 ವರ್ಷದ ಮಹಿಳೆಯೊಬ್ಬರು ಅಂಗದಾನ ಮಾಡಿದ್ದು, ರೊಬೋಟಿಕ್ ತಂತ್ರಜ್ಞಾನದ ಮೂಲಕ ಪಿತ್ತಜನಕಾಂಗ ಕಸಿ ಮಾಡಲಾಗಿದೆ. ದಾನಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದಂತೆ ಶಸ್ತ್ರಚಿಕಿತ್ಸೆ ನಡೆದಿದೆ. ಇಬ್ಬರ ಆರೋಗ್ಯ ಮಟ್ಟ ಸುಧಾರಣೆಯಾಗಿದೆ’ ಎಂದು ವಿವರಿಸಿದರು.

‘ಶಸ್ತ್ರಚಿಕಿತ್ಸೆ 10ಗಂಟೆಗಳ ಕಾಲ ನಡೆ ಯಿತು. ಇದಕ್ಕೆ ₹25 ಲಕ್ಷದಿಂದ ₹30 ಲಕ್ಷ ವೆಚ್ಚ ಆಗಲಿದೆ. ಸಾಮಾನ್ಯವಾಗಿ ಮೂತ್ರ ಪಿಂಡ, ಹೃದಯ ಮತ್ತು ಸ್ತ್ರೀರೋಗ ಸಮಸ್ಯೆಗಳಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಪಿತ್ತಜನಕಾಂಗ ಕಸಿಗೆ ಈ ವಿಧಾನ ಅನುಸರಿಸುವುದು ಅಪರೂಪ’ ಎಂದರು.

ಪ್ರತಿಕ್ರಿಯಿಸಿ (+)