ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live| ಆರ್‌.ಆರ್‌ ನಗರ ಕ್ಷೇತ್ರ ಉಪ ಚುನಾವಣೆ: ಮುನಿರತ್ನಗೆ 57,936 ಮತಗಳ ಭರ್ಜರಿ ಗೆಲುವು
LIVE

ಶಾಸಕ ಮುನಿರತ್ನ ರಾಜೀನಾಮೆಯಿಂದ ತೆರವಾಗಿದ್ದ ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಬಿಜೆಪಿಯ ಮುನಿರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿ ಸುತ್ತಿನ ಮತ ಎಣಿಕೆಯ ಸಂಪೂರ್ಣ ವಿವರ ಇಲ್ಲಿ ಲಭ್ಯವಿದೆ.
Last Updated 10 ನವೆಂಬರ್ 2020, 11:39 IST
ಅಕ್ಷರ ಗಾತ್ರ
11:3910 Nov 2020
09:3410 Nov 2020

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆಯ ಸಂಪೂರ್ಣ ಮಾಹಿತಿ

09:2410 Nov 2020

57,936 ಮತಗಳ ಅಂತರದಿಂದ ಮುನಿರತ್ನ ಗೆಲುವು

ಕೊನೆಯ/25ನೇ ಸುತ್ತು

ಮುನಿರತ್ನ (ಬಿಜೆಪಿ)-1,25,734
ಕುಸುಮಾ (ಕಾಂಗ್ರೆಸ್‌)-67,798
ಕೃಷ್ಣಮೂರ್ತಿ (ಜೆಡಿಎಸ್‌)-10,251
ನೋಟಾ- 2,494

57,936 ಮತಗಳಿಂದ ಗೆದ್ದ ಮುನಿರತ್ನ 

09:1810 Nov 2020

ಬಿಜೆಪಿ ಕಾರ್ಯಕರ್ತರ ಸಣಂಭ

09:1110 Nov 2020

24ನೇ ಸುತ್ತಿನ ಮತ ಎಣಿಕೆ ವಿವರ

ಮುನಿರತ್ನ (ಬಿಜೆಪಿ)-1,24,446
ಕುಸುಮಾ (ಕಾಂಗ್ರೆಸ್‌)-67,405
ಕೃಷ್ಣಮೂರ್ತಿ (ಜೆಡಿಎಸ್)-10,187
ನೋಟಾ- 2471

ಮುನಿರತ್ನ ಅಂತರ- 57,041

08:5310 Nov 2020

23ನೇ ಸುತ್ತಿನ ವಿವರ

ಮುನಿರತ್ನ (ಬಿಜೆಪಿ) 1,18,981
ಕುಸುಮಾ (ಕಾಂಗ್ರೆಸ್‌) - 65,501
ಕೃಷ್ಣಮೂರ್ತಿ (ಜೆಡಿಎಸ್) - 9,957
ನೋಟಾ- 2341

ಮುನಿರತ್ನ ಅಂತರ- 53,480

ಇನ್ನು ಎರಡು ಸುತ್ತುಗಳ ಮತ ಎಣಿಕೆ ಮಾಹಿತಿಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಬೇಕಿದೆ.

08:5110 Nov 2020

ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ– ಮುನಿರತ್ನ

‘ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಮತದಾರರಿಗೆ ನನ್ನ ಧನ್ಯವಾದಗಳು. ಚಾಮುಂಡೇಶ್ವರಿ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ’ ಎಂದು ಆರ್‌.ಆರ್‌. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದರು.

ಕ್ಷೇತ್ರದಲ್ಲಿ ಗೆಲುವು ಖಚಿತವಾಗುತ್ತಿದ್ದಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೊದಲ ಚುನಾವಣೆಯಲ್ಲಿ 17 ಸಾವಿರ ಮತಗಳಿಂದ, ಎರಡನೇ ಚುನಾವಣೆಯಲ್ಲಿ 26 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆ. ಈ ಬಾರಿ 57 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೇನೆ’ ಎಂದರು.

‘ನನ ಗೆಲುವಿಗೆ ಎಲ್ಲರೂ ಕಾರಣ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಸಚಿವರು, ಶಾಸಕರಿಗೆ ನನ್ನ ಗೆಲುವುನ್ನು ಅರ್ಪಿಸುತ್ತೇನೆ’ ಎಂದರು.

‘ನನ್ನ ವಿರೋಧಿ ಅಭ್ಯರ್ಥಿ (ಕಾಂಗ್ರೆಸ್‌ನ ಕುಸುಮಾ) ನಿಜ ಮಾತನಾಡಬೇಕು. ಕೊನೆ ಕ್ಷಣದಲ್ಲಿ ನಾನು ಆಡದ ಮಾತನ್ನು ಆಡಿದ್ದೇನೆ ಎಂದು ಹೇಳಿ ಅಪಪ್ರಚಾರ ಮಾಡಿದರು. ಆದರೆ, ನಾನು ಎಂದೂ ಹೆಣ್ಣು ಮಕ್ಕಳು ವಿರುದ್ದ ಮಾತನಾಡಲಿಲ್ಲ’ ಎಂದರು.

08:4110 Nov 2020

21, 22ನೇ ಸುತ್ತಿನ ಮಾಹಿತಿ

21ನೇ ಸುತ್ತಿನ ಮತ ಎಣಿಕೆ ವಿವರ 

ಮುನಿರತ್ನ- 1,07,822
ಕುಸುಮಾ- 61,095
ಕೃಷ್ಣಮೂರ್ತಿ- 9502
ನೋಟಾ- 1,979

ಮುನಿರತ್ನ ಅಂತರ - 46,727

***

22ನೇ ಸುತ್ತಿನ ವಿವರ 

ಮುನಿರತ್ನ- 1,13,156
ಕುಸುಮಾ- 63,553
ಕೃಷ್ಣಮೂರ್ತಿ- 9,764
ನೋಟಾ- 1,165

ಮುನಿರತ್ನ ಅವರ ಮುನ್ನಡೆ - 49,603

08:3010 Nov 2020

ಪ್ರಜಾವಾಣಿ ವಿಶ್ಲೇಷಣೆ

08:1510 Nov 2020

ಮುನಿರತ್ನ ಹ್ಯಾಟ್ರಿಕ್‌ ಗೆಲುವು ಖಚಿತ: ಘೋಷಣೆಯಷ್ಟೇ ಬಾಕಿ

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ‘ಕೈ’ ಕೊಟ್ಟು ಬಿಜೆಪಿಯಿಂದ ಕಣಕ್ಕಿಳಿದ ಮುನಿರತ್ನ ಅವರು ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಕುಸುಮಾ ಅವರಿಗಿಂತ ಭಾರಿ ಅಂತರದ ಮುನ್ನಡೆ ಸಾಧಿಸಿದ್ದು, ಹ್ಯಾಟ್ರಿಕ್‌ ಗೆಲವು ಸಾಧಿಸುವುದು ಖಚಿತಗೊಂಡಿದೆ.

ಮುನಿರತ್ನ ಅವರ ಅಂತರ 44 ಸಾವಿರ ದಾಟಿದೆ. ಇನ್ನು 5 ಸುತ್ತುಗಳ ಮತ ಎಣಿಕೆ ಮಾತ್ರ ಬಾಕಿ ಇದೆ. ಆದರೆ, ಅವರು ಸಾಧಿಸಿರುವ ಮುನ್ನಡೆಯನ್ನು ಇನ್ನಿರುವ ಸುತ್ತುಗಳಲ್ಲಿ ಕುಸುಮಾ ಅವರಿಗೆ ಮೀರಿ ನಿಲ್ಲಲು ಸಾಧ್ಯ ಇಲ್ಲ. ಹೀಗಾಗಿ, ಎಲ್ಲ ಸುತ್ತುಗಳ ಮತ ಎಣಿಕೆ ಪೂರ್ಣಗೊಂಡು, ಬಹುಮತದ ಅಂತರವಷ್ಟೆ ನಿರ್ಧಾರ ಆಗಬೇಕಿದೆ. ಬಳಿಕ ಚುನಾವಣಾ ಅಯೋಗ ಮುನಿರತ್ನ ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಲಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ– ಕಣ್ಣೀರ ರಾಜಕಾರಣದ ಕಾರಣದಿಂದ ಆರ್‌.ಆರ್‌. ನಗರದ ಚುನಾವಣೆ ಭಾರಿ ಕುತೂಹಲ ಮೂಡಿಸಿತ್ತು. ಅಲ್ಲದೆ, ಎರಡೂ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ನಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು.

ಆದರೆ, ಮತದಾರ ಬಿಜೆಪಿ ‘ಕೈ’ ಹಿಡಿದಿರುವುದು ಸ್ಪಷ್ಟವಾಗಿದೆ. ಬಿಜೆಪಿ ನಾಯಕರ ನಿರೀಕ್ಷೆಗೂ ಮೀರಿ ಮತದಾರರರು ಮುನಿರತ್ನ ಅವರನ್ನು ಬೆಂಬಲಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ 20 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಮುನಿರತ್ನ ಅವರು 1,03,139 ಮತಗಳನ್ನು ಪಡೆದಿದ್ದಾರೆ. ಮುಸುಮಾ ಅವರು 58,528 ಮತಗಳನ್ನು ಪಡೆದರೆ, ಜೆಡಿಎಸ್‌ನ ಕೃಷ್ಣಮೂರ್ತಿ ಅವರು 8,794 ಮತ ಪಡೆಯಲು ಮಾತ್ರ ಶಕ್ತರಾಗಿದ್ದಾರೆ. ಮುನಿರತ್ನ ಅವರು 44,611 ಮತಗಳ ಅಂತರದಿಂದ ಮುಂದಿದ್ದಾರೆ. ಇನ್ನ 5 ಸುತ್ತುಗಳ ಮತ ಎಣಿಕೆ ಮಾತ್ರ ಬಾಕಿ ಇದೆ.