ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಪಾಠ ಮಾಡಿದ ಕುಸುಮಾ

Last Updated 3 ಜುಲೈ 2021, 19:02 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ಕಾಂಗ್ರೆಸ್‌ ನಾಯಕಿ ಎಚ್. ಕುಸುಮಾ ಅವರು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾತನ್‌ ನಗರ ಕೊಳೆಗೇರಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ, ಮಕ್ಕಳಿಗೆ ಪಾಠ ಮಾಡಿದರು.

ಕೊಳಚೆ ಪ್ರದೇಶದ ಪ್ರತಿ ಮನೆಗೆ ಭೇಟಿ ನೀಡಿದ ಅವರು, ಜನರ ಕಷ್ಟ ಸುಖ ವಿಚಾರಿಸಿದರು. ‘ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ’ ಎಂದು ಪೋಷಕರಲ್ಲಿ ಮನವಿ ಮಾಡಿದರು.

‘ಕೋವಿಡ್‌ ಬಿಕ್ಕಟ್ಟು ಆರಂಭವಾಗಿ ಒಂದು ವರ್ಷವೇ ಕಳೆದಿದ್ದರೂ ಯಾವುದೇ ಆರೋಗ್ಯಾಧಿಕಾರಿಯಾಗಲಿ, ಆಶಾ ಕಾರ್ಯಕರ್ತರಾಗಲಿ ಭೇಟಿ ನೀಡಿಲ್ಲ. ಬಡವರ ಬಗ್ಗೆ ಸರ್ಕಾರ ತೀವ್ರ ನಿರ್ಲಕ್ಷ್ಯ ತೋರಿಸುತ್ತಿದೆ’ ಎಂದು ಸ್ಥಳೀಯ ನಿವಾಸಿ ಲತಾ ಎಂಬುವರು ದೂರಿದರು.

‘ಈ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಇಲ್ಲಿನ ನಿವಾಸಿಗಳಿಗೆ ಪಡಿತರ ಕಾರ್ಡ್‌ ಇಲ್ಲ, ಆಧಾರ್‌ ಕಾರ್ಡ್‌ ಕೂಡ ಒದಗಿಸಿಲ್ಲ. ಶೌಚಾಲಯ ಸೌಲಭ್ಯ ಕೂಡ ಇಲ್ಲ. ಮಣ್ಣುಮಿಶ್ರಿತ ಕೊಳವೆಬಾವಿ ನೀರನ್ನೇ ಕುಡಿಯುವ ಪರಿಸ್ಥಿತಿ ಇದೆ’ ಎಂದು ಕುಸುಮಾ ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT