ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೇ 70ರಷ್ಟು ಪ್ರಾಯೋಗಿಕ ಕಲಿಕೆಗೆ ಇರಲಿ ಅವಕಾಶ’

Last Updated 24 ಜುಲೈ 2021, 4:43 IST
ಅಕ್ಷರ ಗಾತ್ರ

ಬೆಂಗಳೂರು: ‘ಭವಿಷ್ಯದ ಮಾದರಿ ಶಿಕ್ಷಣ ಪದ್ಧತಿಯು ಶೇ 70ರಷ್ಟು ಪ್ರಾಯೋಗಿಕ ಕಲಿಕೆಗೆ ಅವಕಾಶ ನೀಡುವಂತಿರಬೇಕು. ಶೇ 20ರಷ್ಟು ಔಪಚಾರಿಕ ಮತ್ತು ಅನೌಪಚಾರಿಕ ಕಲಿಕೆಗೆ ಅವಕಾಶವಿದ್ದರೆ, ಶೇ 10ರಷ್ಟು ಮಾತ್ರ ಪಠ್ಯ ಆಧಾರಿತವಾಗಿರಬೇಕು’ ಎಂದು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ (ಎಸ್‌ವಿವೈಎಂ) ಸ್ಥಾಪಕ ಡಾ. ಆರ್. ಬಾಲಸುಬ್ರಮಣ್ಯಂ ಹೇಳಿದರು.

ನಗರದ ಆರ್.ವಿ. ವಿಶ್ವವಿದ್ಯಾಲಯವು ‘ಭವಿಷ್ಯದ ಕಲ್ಲಿಕೆಗೆ ಸಜ್ಜಾಗುವ ವಿಶ್ವವಿದ್ಯಾಲಯದ ನಿರ್ಮಾಣ’ ವಿಷಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳನ್ನು ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಸಜ್ಜುಗೊಳಿಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕಿದೆ. ಡಿಜಿಟಲ್‌ ಮತ್ತು ದತ್ತಾಂಶ ವಿಜ್ಞಾನದ ಕೌಶಲಗಳನ್ನು ಅವರಲ್ಲಿ ಬೆಳೆಸುವ ನಿಟ್ಟಿನಲ್ಲಿಯೂ ವಿಶ್ವವಿದ್ಯಾಲಯಗಳು ಚಿಂತನೆ ನಡೆಸುವ ಅವಶ್ಯಕತೆ ಇದೆ’ ಎಂದು ಸಲಹೆ ನೀಡಿದರು.

‘ವಿಶ್ವವಿದ್ಯಾಲಯಗಳು ಅಳವಡಿಸಿಕೊಳ್ಳುವ ಪಠ್ಯಕ್ರಮಗಳೂ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಸಮಗ್ರ ಕಲಿಕೆಗೆ ವ್ಯವಸ್ಥೆ ಒದಗಿಸುವ ಸಂಸ್ಥೆಗಳಾಗಬೇಕೇ ವಿನಾ ಕೇವಲ ಮಾಹಿತಿ ಒದಗಿಸುವುದಕ್ಕೆ ಸೀಮಿತವಾಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT