ಸಾಲುಮರದ ತಿಮ್ಮಕ್ಕಗೆ ‘ಜೀವ ಸಮೃದ್ಧಿ’ ಪ್ರಶಸ್ತಿ

ಬೆಂಗಳೂರು: ಕೇರಳದ ಸಮತಾ ಸಂಸ್ಥೆಯು 2020ನೇ ಸಾಲಿನ ಜೀವ ಸಮೃದ್ಧಿ ಪ್ರಶಸ್ತಿಗೆ ಸಾಲು ಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಿದೆ.
ಈ ಪುರಸ್ಕಾರವನ್ನು ಸಮುದಾಯ ಕರ್ನಾಟಕ ಹಾಗೂ ಪುರೋಗಮನ ಕಲಾ ಸಾಹಿತ್ಯ ಸಂಘದ (ಪುಕಸ) ಸಹಯೋಗದಲ್ಲಿ ನೀಡಲಾಗುತ್ತಿದೆ.
ಖ್ಯಾತ ಪರಿಸರ ಕಾರ್ಯಕರ್ತೆ ಕೀನ್ಯಾದ ವಾಂಗಾರಿ ಮಾತಾಯಿಯವರ ಸ್ಮರಣೆಯಲ್ಲಿ ಈ ಪ್ರಶಸ್ತಿಯನ್ನು ಸಮತಾ ನೀಡುತ್ತಿದೆ. ನ. 10ರಂದು ಬೆಳಿಗ್ಗೆ 11ಕ್ಕೆ ತಿಮ್ಮಕ್ಕ ಅವರ ಮನೆಯಲ್ಲಿಯೇ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪುಕಸದ ಆರ್.ವಿ. ಆಚಾರಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.