ಸ್ಯಾಂಟ್ರೊ ರವಿಯನ್ನು ಪುಣೆಯಿಂದ ಗುಜರಾತ್‌ಗೆ ಕರೆಸಿದವರು ಯಾರು?: HDK ಪ್ರಶ್ನೆ

ಬೆಂಗಳೂರು: ಪುಣೆಯಲ್ಲಿದ್ದ ಸ್ಯಾಂಟ್ರೊ ರವಿಯನ್ನು ಗುಜರಾತ್‌ಗೆ ಕರೆಸಿದವರು ಯಾರು? ಅಲ್ಲಿ ಬಂಧನಕ್ಕೂ ಮೊದಲು ಆತನಿಗೆ ಏನು ಆಶ್ವಾಸನೆ ನೀಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 'ರಾಜ್ಯದಿಂದ ಪರಾರಿಯಾಗಿದ್ದ ರವಿಯನ್ನು ಗುಜರಾತ್‌ಗೆ ಕರೆಸಿಕೊಳ್ಳಲಾಗಿದೆ. ಅಲ್ಲಿ ಆತನನ್ನು ಬಂಧಿಸುವ ಪ್ರಕ್ರಿಯೆ ನಡೆದಿದೆ. ಅಲ್ಲಿಗೆ ಆತನನ್ನು ಕರೆದುಕೊಂಡು ಬಂದವರು ಯಾರು ಎಂಬುದು ಬಹಿರಂಗವಾಗಬೇಕು' ಎಂದರು.
ಸ್ಯಾಂಟ್ರೊ ರವಿಯನ್ನು ಗುಜರಾತ್‌ನಲ್ಲಿ ಬಂಧಿಸುವ ಮೊದಲು ಗೃಹ ಸಚಿವರು ಅಲ್ಲಿಗೆ ಏಕೆ ಹೋಗಿದ್ದರು? ಅವರ ಭೇಟಿಯ ಬಗ್ಗೆ ನನಗೆ ಅನುಮಾನಗಳಿವೆ ಎಂದು ಹೇಳಿದರು.
'ನಮ್ಮ ಅವಧಿಯಲ್ಲಿ ಈ ರೀತಿ ದಂಧೆಕೋರರು, ದಲ್ಲಾಳಿಗಳ ಕೈಗೆ ಅಧಿಕಾರಿಗಳ ವರ್ಗಾವಣೆ ಅಧಿಕಾರ ನೀಡಿರಲಿಲ್ಲ. ಬೆಟ್ಟಿಂಗ್ ದಂಧೆಕೋರರು ಸರ್ಕಾರದ ಮೇಲೆ ಹಿಡಿತ ಸಾಧಿಸಿರಲಿಲ್ಲ. ಅಂತಹವರಲ್ಲಿ ಮುಖ್ಯಮಂತ್ರಿ ಕಚೇರಿಯೊಳಕ್ಕೆ ಬಿಟ್ಟುಕೊಂಡಿರಲಿಲ್ಲ' ಎಂದರು.
ಬಿಜೆಪಿ ಸರ್ಕಾರದ ಸಚಿವರು, ಶಾಸಕರ ವೈಯಕ್ತಿಕ ನಡವಳಿಕೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.