ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವರ್ಕರ್‌ ಮೇಲ್ಸೇತುವೆ ನಾಮಫಲಕ ಪ್ರಕರಣ|ನಾಮಫಲಕಕ್ಕೆ ಮಸಿ ಬಳಿದ ಮೂವರ ಸೆರೆ

Published 28 ಮೇ 2024, 23:30 IST
Last Updated 28 ಮೇ 2024, 23:30 IST
ಅಕ್ಷರ ಗಾತ್ರ

ಯಲಹಂಕ: ಉಪನಗರದ ಸಂದೀಪ್‌ ಉನ್ನಿಕೃಷ್ಣ ರಸ್ತೆಯ ಡೇರಿ ವೃತ್ತದಲ್ಲಿರುವ ವೀರ ಸಾರ್ವಕರ್‌ ಮೇಲ್ಸೇತುವೆಯ ನಾಮಫಲಕ ಹಾಗೂ ನಾಮಫಲಕದಲ್ಲಿದ್ದ ವೀರ ಸಾರ್ವಕರ್‌ ಅವರ ಭಾವಚಿತ್ರಕ್ಕೆ ಮಸಿ ಬಳಿದ ಆರೋಪದ ಮೇಲೆ ಯಲಹಂಕ ಉಪನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಲಕ್ಷ್ಯರಾಜ್‌, ನಿಶ್ಚಯ್‌ ಗೌಡ ಹಾಗೂ ಪ್ರವೀಣ್‌ ಬಂಧಿತ ಆರೋಪಿಗಳು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ಮಂಗಳವಾರ ಮಧ್ಯಾಹ್ನ 1.30ರಿಂದ 2 ಗಂಟೆಯ ವೇಳೆಯಲ್ಲಿ ಮಸಿ ಬಳಿದು ವಿರೂಪಗೊಳಿಸಿದ್ದರು. ಸಿ.ಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು ಯಾವ ಸಂಘಟನೆಗೆ ಸೇರಿದವರು ಎಂಬುದು ತಿಳಿದಿಲ್ಲ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಘಟನೆ ಖಂಡಿಸಿ ಪ್ರತಿಭಟನೆ: ಘಟನೆ ಖಂಡಿಸಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮೇಲ್ಸೇತುವೆ ಬಳಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನದ ವೇಳೆಯಲ್ಲಿ ಕೆಲವು ಯುವಕರು, ಏಕಾಏಕಿ ಸಾವರ್ಕರ್‌ ಅವರ ಮೇಲ್ಸೇತುವೆಯ ನಾಮಫಲಕಕ್ಕೆ ಮಸಿಬಳಿದು ಘೋಷಣೆಗಳನ್ನು ಕೂಗಿದರು. ವೀರಸಾವರ್ಕರ್‌ಗೆ ಸಿಗುತ್ತಿರುವ ಗೌರವ ಭಗತ್‌ಸಿಂಗ್‌ಗೆ ಸಿಗುತ್ತಿಲ್ಲ. ಮೇಲ್ಸೇತುವೆಗೆ ವೀರಸಾವರ್ಕರ್‌ ಹೆಸರಿನ ಬದಲು ಭಗತ್‌ಸಿಂಗ್‌ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೇಲ್ಸೇತುವೆ ಬಳಿ ಜಮಾಯಿಸಿ, ಘಟನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ವಿಶ್ವನಾಥ್‌ ಮಾತನಾಡಿ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಕಿಡಿಗೇಡಿಗಳಿಗೆ ಭಯವಿಲ್ಲದಂತಾಗಿ ರಾಜಾರೋಷವಾಗಿ ರಸ್ತೆಯಲ್ಲಿ ಗೂಂಡಾಗಿರಿ, ಹಲ್ಲೆ, ಕೊಲೆಯಂತಹ ಘಟನೆಗಳು ಹೆಚ್ಚಾಗಿವೆ. ನಾವೆಲ್ಲರೂ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಗೆ ತೆರಳಿದ್ದವು. ಈ ಸಂದರ್ಭದಲ್ಲಿ ಬೇರೆ ಕಡೆಗಳಿಂದ ಯಲಹಂಕಕ್ಕೆ ಬಂದಿದ್ದವರು ವೀರಸಾವರ್ಕರ್‌ ಅವರ ಮೇಲ್ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಇದೊಂದು ಹೇಡಿತನದ ಕೃತ್ಯವಾಗಿದ್ದು. ಕೂಡಲೇ ಆರೋಪಿಗಳನ್ನು ಬಂಧಿಸಿ, ಕಾನೂನುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ಕಾರ್ಯಕರ್ತರೊಂದಿಗೆ ಪೊಲೀಸ್‌ ಠಾಣೆಗೆ ತೆರಳಿದ ವಿಶ್ವನಾಥ್‌, ಕೂಡಲೇ ಕೃತ್ಯ ಎಸಗಿರುವ ಉಳಿದ ಆರೋಪಿಗಳನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.

ಜಯಂತಿ ಆಚರಣೆ:
ಬಿಜೆಪಿ ಕಾರ್ಯಕರ್ತರು, ವಿಶ್ವನಾಥ್‌ ನೇತೃತ್ವದಲ್ಲಿ ಸಾವರ್ಕರ್‌ ಮೇಲ್ಸೇತುವೆ ಬಳಿ ಸಾವರ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜಯಂತಿ ಆಚರಿಸಿದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಸಿಹಿಹಂಚಿ ಸಂಭ್ರಮಿಸಿದರು.

ನಿಶ್ಚಯ್‌ಗೌಡ
ನಿಶ್ಚಯ್‌ಗೌಡ
ಪ್ರವೀಣ್‌
ಪ್ರವೀಣ್‌
ಲಕ್ಷ್ಯರಾಜ್‌
ಲಕ್ಷ್ಯರಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT