ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲದಲ್ಲೇ ತ್ಯಾಜ್ಯ ವಿಂಗಡಣೆ

‘ಬ್ರ‍್ಯಾಂಡ್ ಬೆಂಗಳೂರು– ಸ್ವಚ್ಛ ಬೆಂಗಳೂರು’: ನಾಗರಿಕರಿಂದ 10 ಸಾವಿರಕ್ಕೂ ಹೆಚ್ಚು ಸಲಹೆ
Published 4 ಆಗಸ್ಟ್ 2023, 0:35 IST
Last Updated 4 ಆಗಸ್ಟ್ 2023, 0:35 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಬೇಕು, ಕಸದಿಂದ ವಿದ್ಯುತ್‌ ತಯಾರಿ, ತ್ಯಾಜ್ಯ ನಿರ್ವಹಣೆಗೆ ಕೇಂದ್ರೀಕೃತ ಮತ್ತು ವಿಕೇಂದ್ರೀಕೃತ ಪದ್ಧತಿ ಬಳಕೆ, ವಿಲೇವಾರಿ ಬಗ್ಗೆ ಯುವಕರು ಹಾಗೂ ಮಕ್ಕಳಿಗೆ ಜಾಗೃತಿ ನೀಡಬೇಕು...

‘ಬ್ರ‍್ಯಾಂಡ್ ಬೆಂಗಳೂರಿನ’ ಅಭಿಯಾನದ ಅಂಗವಾಗಿ ಘನತ್ಯಾಜ್ಯ ನಿರ್ವಹಣೆಗೆ ನಾಗರಿಕರಿಂದ ಬಂದಿರುವ ಪ್ರಮುಖ ಸಲಹೆಗಳಿವು.

‘ಸ್ವಚ್ಚ ಬೆಂಗಳೂರು’ ವಿಭಾಗದ ಬಗ್ಗೆ 10,479 ಸಲಹೆಗಳು ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ವಿಭಾಗ ಎಲ್ಲಾ ಸಲಹೆಗಳನ್ನು ಬೇರ್ಪಡಿಸಿ ವರದಿಯನ್ನು ಸಿದ್ದಪಡಿಸಲಿದೆ.

ಈ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ವಿಚಾರ ಸಂಕಿರಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಶೇಖ್ ಲತೀಫ್ ಮಾತನಾಡಿ, ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಪಾಲಿಕೆಯ ಕರ್ತವ್ಯ ಮಾತ್ರವಲ್ಲ, ಎಲ್ಲ ವರ್ಗದ ನಾಗರಿಕರ ಕರ್ತವ್ಯ. ಜವಾಬ್ದಾರಿಗಳನ್ನು ಅರಿತು ಮೂಲದಲ್ಲಿಯೇ ಸ್ವಚ್ಛತೆ ಕಾಪಾಡಿದರೆ ಸ್ವಚ್ಛ ಬೆಂಗಳೂರನ್ನಾಗಿಸಲು ಸಾಧ್ಯ ಎಂದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಪ್ರಧಾನ ಎಂಜಿನಿಯರ್‌ ಬಸವರಾಜ್ ಕಬಾಡೆ ಮಾತನಾಡಿ, ‘ಸ್ವಚ್ಛ ಬೆಂಗಳೂರು ವಿಭಾಗದ ಅಭಿವೃದ್ಧಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದೊಂದಿಗೆ ಶೈಕ್ಷಣಿಕ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಸಲಹೆಗಳನ್ನು ಕ್ರೋಡೀಕರಿಸಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ಸುಮಾರು 1.4 ಕೋಟಿ ಲಕ್ಷ ಜನಸಂಖ್ಯೆಯಿದ್ದು, ಪ್ರತಿನಿತ್ಯ 5,500 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡದಿದ್ದಲ್ಲಿ ಮುಂದಿನ 15 ವರ್ಷಗಳಲ್ಲಿ 12,000 ಮೆ.ಟನ್‌ ಉತ್ಪತ್ತಿಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT