ಸೋಮವಾರ, ನವೆಂಬರ್ 18, 2019
25 °C

ಲೈಂಗಿಕ ಕಿರುಕುಳ ಆರೋಪಆಟೊ ಚಾಲಕನ ಬಂಧನ

Published:
Updated:

ಬೆಂಗಳೂರು: ಬಾರ್ ಗರ್ಲ್ಸ್ ಇಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಟೊ ಚಾಲಕನೊಬ್ಬನನ್ನು ಆರ್‌ಎಂಸಿ ಯಾರ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರ ನಿವಾಸಿ ಚಂದ್ರು (35) ಬಂಧಿತ ಆರೋಪಿ. ಮಹಾರಾಷ್ಟ್ರ ಮತ್ತು ದೆಹಲಿಯ ಯುವತಿಯರು ಶೇಷಾದ್ರಿಪುರದ ಸಂಗೀತಾ ಹೋಟೆಲ್‌ನಲ್ಲಿ ಬಾರ್ ಗರ್ಲ್ಸ್ ಆಗಿದ್ದಾರೆ. ನ. 2ರಂದು ರಾತ್ರಿ 12 ಗಂಟೆ ಸುಮಾರಿಗೆ ಇಬ್ಬರು ಯುವತಿಯರು ಹೋಟೆಲ್‌ನಿಂದ ಬಿಟಿಎಂ ಲೇಔಟ್‌ಗೆ ಕರೆದೊಯ್ಯುವಂತೆ ಆಟೊ ಚಾಲಕನಿಗೆ ಹೇಳಿದ್ದರು.

ಚಾಲಕ ಬಿಟಿಎಂ ಲೇಔಟ್ ಕಡೆಗೆ ಹೋಗದೆ, ಯಶವಂತಪುರದ ಹೂವಿನ ಮಾರ್ಕೆಟ್ ಕಡೆ ಆಟೊ ತಿರುಗಿಸಿದ್ದಾನೆ. ಯಶವಂತಪುರ ಕಡೆಗೆ ಹೋಗುವಾಗಲೇ ಸಂತ್ರಸ್ತರು ಆರೋಪಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ, ‘ನೀವು ಹೇಳಿದ ಸ್ಥಳಕ್ಕೇ ಕರೆದುಕೊಂಡು ಹೋಗುತ್ತಿದ್ದೇನೆ’ ಎಂದಿದ್ದಾನೆ. ಆದರೆ, ನಂತರ ಯಶವಂತಪುರದಲ್ಲಿ ಆಟೊ ನಿಲ್ಲಿಸಿದ್ದ ಆರೋಪಿ, ಯುವತಿಯರನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

 

ಪ್ರತಿಕ್ರಿಯಿಸಿ (+)