ಬುಧವಾರ, ಮಾರ್ಚ್ 3, 2021
30 °C

‘ಕುಮಾರವ್ಯಾಸ ಭಾರತದಲ್ಲಿ ಭಗವದ್ಗೀತೆ’ ಬಿಡುಗಡೆ 30ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೇಖಕಿ ಡಾ. ಸುನಂದಾ ಅವರ ‘ಕುಮಾರವ್ಯಾಸ ಭಾರತದಲ್ಲಿ ಭಗವದ್ಗೀತೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೇ 30ರಂದು ಶಕುಂತಲ ದೇವಿ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸೈನ್ಸಸ್‌ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.

ಸಂಸ್ಥೆಯೇ ಈ ಪುಸ್ತಕವನ್ನು ಮುದ್ರಿಸಿ, ಬಿಡುಗಡೆಗೊಳಿಸುತ್ತಿದೆ. ‘ಮಾನವ ಕಂಪ್ಯೂಟರ್‌’ ಎಂದೇ ಖ್ಯಾತರಾಗಿದ್ದ ಶಕುಂತಲಾ ದೇವಿಯವರು ಸ್ಥಾಪಿಸಿರುವ ಶಕುಂತಲ ದೇವಿ ಎಜುಕೇಷನಲ್‌ ಫೌಂಡೇಷನ್‌ ಪಬ್ಲಿಕ್‌ ಟ್ರಸ್ಟ್ ಆಯೋಜಿಸಿರುವ ಈ ಕಾರ್ಯಕ್ರಮ ಶನಿವಾರ ಬೆಳಿಗ್ಗೆ 11ಕ್ಕೆ ಪ್ರಾರಂಭವಾಗಲಿದೆ.

ಉನ್ನತಶಿಕ್ಷಣ ಸಚಿವರ ವಿಶೇಷಾಧಿಕಾರಿ ಡಾ.ಎ.ವಿ. ಪ್ರಸನ್ನ, ಅಮೆರಿಕದಲ್ಲಿನ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ.ಕೆ. ಶಾಸ್ತ್ರಿ, ಎಪಿಎಸ್‌ ಎಜುಕೇಷನಲ್‌ ಟ್ರಸ್ಟ್‌ನ ಕಾರ್ಯದರ್ಶಿ ಎ.ಆರ್. ಆಚಾರ್ಯ ಅತಿಥಿಗಳಾಗಿ ಭಾಗವಹಿಸುವರು. ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ. ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದು, ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿಶ್ರಾಂತ ನಿರ್ದೇಶಕ ಡಾ.ಎ.ಶ್ರೀನಿವಾಸನ್‌ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು