ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಗಂಗೆ: ಅಂತರ ಮರೆತ ಭಕ್ತರು

Last Updated 1 ಜನವರಿ 2021, 20:38 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಹೊಸ ವರ್ಷದ ಪ್ರಯುಕ್ತ ನೆಲಮಂಗಲ ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಶಿವಗಂಗೆ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತು. ಆದರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕ್ ಧರಿಸದೇ, ಅಂತರ ಕಾಪಾಡಿಕೊಳ್ಳದೇ ಗಂಗಾಧರೇಶ್ವರ ಹಾಗೂ ಹೊನ್ನಾದೇವಿ ದೇವಾಲಯಗಳಿಗೆ ಭಕ್ತರು ಮುಗಿಬಿದ್ದದ್ದು ಕಂಡು ಬಂತು.

ಬಂದವರು ದೇವಾಲಯಗಳಿಗಷ್ಟೇ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಬೆಟ್ಟ ಹತ್ತುವುದನ್ನು ನಿರ್ಬಂಧಿಸಲಾಗಿತ್ತು.

ಆದರೂ ಪ್ರತಿವರ್ಷದಂತೆ ಸಾವಿರಾರು ಜನ ಶಿವಗಂಗೆಗೆ ಬಂದಿದ್ದರು. ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇದ್ದದ್ದು ಹಾಗೂ ದೇವಾಲಯದ ಆಡಳಿತ ಮಂಡಳಿ ಮತ್ತು ಇಲ್ಲಿನ ಕಾರ್ಯನಿರ್ವಹಣಾಧಿಕಾರಿಯು ಭಕ್ತರು ಅಂತರ ಕಾಪಾಡಿಕೊಂಡು ದೇವರ ದರುಶನ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲು ವಿಫಲರಾದರು ಎಂದು ಭಕ್ತರೊಬ್ಬರು ದೂರಿದರು.

’ಕೊರೊನಾ ಹಾಗೂ ಬ್ರಿಟನ್ ವೈರಸ್ ಹತ್ತಿಕ್ಕುವ ಉದ್ದೇಶದಿಂದ ಸರ್ಕಾರವು ಹೊಸ ವರ್ಷಾಚರಣೆಗೆ ಕೆಲ ನಿಯಮಗಳನ್ನು ರೂಪಿಸಿದೆ. ಅದರಂತೆ ನಡೆದುಕೊಳ್ಳಲು ಸೂಚಿಸಿದೆ. ಆದರೆ ಜನ ಮುಕ್ತವಾಗಿ ದೇವಾಲಯಕ್ಕೆ ಬಂದರು. ಯಾರಿಗಾದರೂ ಸೋಂಕಿದ್ದರೆ ಅಪಾಯ ಖಂಡಿತ‘ ಎಂದು ಸ್ಥಳೀಯ ನಿವಾಸಿ ಮಹೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT