ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರಾಧ್ಯ ಗುರುವೇ ನೀವೆಂದೂ ವಿಭುವೆ’

Last Updated 28 ಜನವರಿ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಟಿ ಕೋಟಿ ಜನಮನದ ಆರಾಧ್ಯ ಗುರುವೇ, ಈ ಮನುಜರ ಪಾಲಿಗೆ ನೀವೆಂದೂ ವಿಭುವೆ, ಬಿಂದು ಸ್ವರೂಪಿ ಮಠವು ಇಂದು ನಿಮ್ಮಿಂದಾಗಿದೆ ಬೃಹದಾಕಾರ ಸಿಂಧು...’ -ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಸಾಹಿತಿದೊಡ್ಡರಂಗೇಗೌಡ ಅವರು ಕಾವ್ಯದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಪರಿ ಇದು.

ರಂಗೋತ್ರಿ ಮಕ್ಕಳ ರಂಗಶಾಲೆ ವತಿಯಿಂದನಗರದಲ್ಲಿಸೋಮವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಗೆ ಕಾವ್ಯ–ಗೀತ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾಮೀಜಿ ನಮ್ಮೆಲ್ಲರನ್ನು ಅಕ್ಕರೆಯಿಂದ ನೋಡುತ್ತಿದ್ದರು. ಆ ಕಣ್ಣುಗಳಲ್ಲಿ ತಾಯಿಯ ವಾತ್ಸಲ್ಯವನ್ನು ಕಂಡಿದ್ದೇನೆ. ಅವರು ಪಂಚಭೂತಗಳಲ್ಲಿ ಲೀನವಾದರೂ ಸಿದ್ಧಗಂಗೆಯಲ್ಲಿ ಹೊಂಬೆಳಕಾಗಿ ನೆಲೆಸಿ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ’ ಎಂದರು.

ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ,‘ನಮ್ಮ ನಾಡು ಅನೇಕ ಕಾರಣಗಳಿಗೆ ಪುಣ್ಯದ ನಾಡು. ಅದರಲ್ಲಿ ಒಂದು ಕಾರಣ ಶರಣ ಚಳವಳಿ. ಪ್ರಪಂಚದಲ್ಲಿ ಗುಲಾಮಿ ಸಂಸ್ಕೃತಿ ಇದ್ದ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎನ್ನುವ ಹೊಸ ಚಳವಳಿಯನ್ನು ಬಸವಣ್ಣನವರು ಆರಂಭಿಸಿದ್ದರು’ ಎಂದರು.

‘ಪರಂಪರೆ ಬಹುಸಂಖ್ಯಾತರಿಗೆ ಶಿಕ್ಷಣ ನಿರಾಕರಿಸಿದಾಗ ಜಾತಿಯನ್ನು ಮೀರಿ ಜನರನ್ನು ಒಗ್ಗೂಡಿಸಿ ಮಠಗಳುಶಿಕ್ಷಣ ನೀಡಿದವು.ಅಂತಹ ಮಠಗಳಲ್ಲಿ ಸಿದ್ಧಗಂಗಾ ಮಠ ಮುಂಚೂಣಿಯಲ್ಲಿತ್ತು. ಇಂದಿಗೂ ಇದೆ’ ಎಂದು ಹೇಳಿದರು.

‘ನಾನು ಚಿಕ್ಕವನಿದ್ದಾಗಚಿಕ್ಕಬಳ್ಳಾಪುರದ ಹತ್ತಿರದ ಮಠದ ವಿದ್ಯಾರ್ಥಿಯಾಗಿದ್ದೆ, ಆಗ ಭಾಷಣ ಸ್ಪರ್ಧೆಗೆಂದು ನನ್ನನ್ನು ತುಮಕೂರಿನಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋದರು. ಹಳ್ಳಿಯಲ್ಲಿ ಅಸ್ಪೃಶ್ಯತೆಗೆ ಒಳಗಾಗಿದ್ದ ನನಗೆ ಮಠದಲ್ಲಿಯೂ ಹಾಗೆ ಮಾಡಬಹುದು ಎನ್ನುವ ಭಯವಿತ್ತು. ಆದರೆ ಅಲ್ಲಿ ಹಾಗಿರಲಿಲ್ಲ, ಸಮಾನತೆ ಇತ್ತು’ ಎಂದು ನೆನಪುಗಳನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT