ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಶಿವಗಂಗೆ’ಗೆ ಶ್ರಮಾದಾನ

Last Updated 28 ನವೆಂಬರ್ 2022, 16:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದಿಂದ ಶಿವಗಂಗೆ ಬೈಕ್‌ ಜಾಥಾ ನಡೆಸಿದಸ್ವಯಂ ಜಾಗೃತಿ ಸೇವಾ ಟ್ರಸ್ಟ್ ಸದಸ್ಯರು, ಶಿವಗಂಗೆಯಲ್ಲಿ ಪ್ಲಾಸ್ಟಿಕ್‌ ಬಳಕೆ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದರು.

‘ಶಿವಗಂಗೆ ಕ್ಷೇತ್ರದಲ್ಲಿ ಸ್ವಚ್ಛತೆ, ನಮ್ಮ ಆದ್ಯತೆ’ ಎಂಬ ಅಭಿಯಾನದಡಿಯಲ್ಲಿ ಭಾನುವಾರ ಜಾಥಾ ನಡೆಸಿದರು. ‘ಸ್ವಚ್ಛ ಶಿವಗಂಗೆ’ ಹೆಸರಿನಲ್ಲಿ ಭರವಸೆ ತಂಡ, ನನ್ ಮಿನಿ ರೇಡಿಯೋ, ಕನ್ನಡ ಪರ ಸಂಘಟನೆಗಳವರು ಶ್ರಮದಾನ ಮಾಡಿ ಪ್ಲಾಸ್ಟಿಕ್‌ ಸಂಗ್ರಹಿಸಿದರು.

‘ಶಿವಗಂಗೆ ಒಂದು ಮಾದರಿ ಕ್ಷೇತ್ರವಾಗಬೇಕು’ ಎಂಬ ನಿಟ್ಟಿನಲ್ಲಿ ಪ್ರತಿಯೊಂದು ಅಂಗಡಿಗೆ ನಂಬರ್ ಹಾಗೂ ಸ್ಟಿಕರ್ ಹಾಕುವ ಮೂಲಕ ಪ್ರವಾಸಿಗರಿಂದ ನೀರಿನ ಬಾಟಲ್‌ಗಳಿಗೆ ₹10 ಹೆಚ್ಚು ಪಡೆಯಬೇಕು. ಅವರು ಬಾಟಲ್‌ ಹಿಂದಿರುಗಿಸಿದ ಮೇಲೆ ಹೆಚ್ಚುವರಿ ಹಣವನ್ನು ವಾಪಸ್‌ ನೀಡಬೇಕು ಎಂದು ಅಂಗಡಿ ಮಾಲೀಕರಿಗೆ ಮನವಿ ಮಾಡಿಕೊಳ್ಳಲಾಯಿತು. ಅಧಿಕಾರಿಗಳು ಸಹ ಬೆಂಬಲ ನೀಡಿದರೆ ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ನಿಷೇಧವಾಗಬಹುದು ಎಂದು ಟ್ರಸ್ಟ್‌ನ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಶಿವಗಂಗೆ ಕಾರ್ಯನಿರ್ವಾಹಕ ಅಧಿಕಾರಿ ರಮ್ಯಾ ಅವರಿಗೆ ಮನವಿಪತ್ರ ಕೂಡ ನೀಡಲಾಯಿತು. ಶಿವಗಂಗೆ ಕ್ಷೇತ್ರದ ಕಿರಿಯ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು.

ಮಲ್ಲೇಶ್ ಗೌಡ್ರು, ಸಂತೋಷ್ ಹಿಂಬಾಳೆ, ಹರೀಶ್,ಗುರುಪ್ರೀತ್, ನಿಂಗರಾಜ್, ಕನ್ನಡ ಚಿತ್ರ ನಿರ್ದೇಶಕ ಸಿಂಪಲ್ ಸುನಿ, ಕನ್ನಡ ಸಂಘಟನೆಯ ದೇವರಾಜ್,ಸಾಗರ್ ಗೌಡ, ಭರವಸೆ ತಂಡದ ಸುನೀಲ್, ಸ್ಥಳೀಯ ತಂಡದ ನಿಖಿತ್, ರಾಕೇಶ್, ಸಂತೋಷ್, ಟ್ರಸ್ಟ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕನ್ನಡಿಗ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT