ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮ್‌ ಹ್ಯಾಕ್: ₹ 45.70 ಲಕ್ಷ ಮಾಯ!

ದಂಪತಿಯ ಖಾತೆಗೆ ಸೈಬರ್‌ ಖದೀಮರ ಕನ್ನ
Last Updated 9 ಜನವರಿ 2020, 19:38 IST
ಅಕ್ಷರ ಗಾತ್ರ

ಬೆಂಗಳೂರು: ದಂಪತಿ ಹೆಸರಿನಲ್ಲಿದ್ದ ಸಂಸ್ಥೆಯ ಖಾತೆಗೆ ಲಿಂಕ್‌ ಆಗಿದ್ದ ಮೊಬೈಲ್‌ ನಂಬರ್‌ ಹ್ಯಾಕ್ ಮಾಡಿದ ಸೈಬರ್‌ ಕಳ್ಳರು, ₹ 45.70 ಲಕ್ಷ ಲಪಟಾಯಿಸಿದ ಘಟನೆ ವಿಜಯನಗರದಲ್ಲಿ ನಡೆದಿದೆ.

ಟಿ.ವಿ. ಜಗದೀಶ್ ಮತ್ತು ಮಂಗಳಾ ಮೋಸ ಹೋದ ದಂಪತಿ. ಕ್ರಿಯೇಟಿವ್‌ ಎಂಜಿನಿಯರ್ಸ್‌ ಎಂಬ ಹೆಸರಿನಲ್ಲಿ ದಂಪತಿ ಸಂಸ್ಥೆಯೊಂದನ್ನು ನಡೆಸುತ್ತಿದ್ದು, ವಿಜಯನಗರದ ಕೆನರಾ ಬ್ಯಾಂಕಿನಲ್ಲಿ ಈ ಸಂಸ್ಥೆಯ ಹೆಸರಿನಲ್ಲಿ ಖಾತೆ ಇದೆ. ಈ ಖಾತೆಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಆಗಿದ್ದು, ನೆಟ್‌ ಬ್ಯಾಂಕಿಂಗ್‌ ಮೂಲಕ ಹಣ ವಹಿವಾಟಿಗೆ ಅವಕಾಶವಿತ್ತು.

ಬ್ಯಾಂಕಿಗೆ ಲಿಂಕ್‌ ಆಗಿದ್ದ ಮೊಬೈಲ್‌ ಸಂಖ್ಯೆ ಇದೇ 4ರಂದು ನಿಷ್ಕ್ರಿಯವಾಗಿತ್ತು. ಎರಡು ದಿನಗಳ ಬಳಿಕ (ಜ. 6ರಂದು) ಏರ್‌ಟೆಲ್‌ ಸಂಸ್ಥೆಯ ಗ್ರಾಹಕ ಕೇಂದ್ರವನ್ನು ಜಗದೀಶ್ ಅವರು ಸಂಪರ್ಕಿಸಿದಾಗ ಸಿಬ್ಬಂದಿ, ಆ ನಂಬರ್‌ ಬೇರೆಯವರ ಹೆಸರಿನಲ್ಲಿ ಆ್ಯಕ್ಟಿವ್‌ ಆಗಿದೆ. ಬೇರೆ ಸಿಮ್‌ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದರು.

ಆದರೆ, ತಮ್ಮ ಕಂಪನಿಯ ಖಾತೆಗೆ ಮೊಬೈಲ್‌ ಸಿಮ್‌ ಲಿಂಕ್‌ ಆಗಿದ್ದರಿಂದ, ಅದೇ ಸಿಮ್‌ ಬೇಕೆಂದು ಜಗದೀಶ್‌ ಕೋರಿದ್ದರು. ಅಷ್ಟೇ ಅಲ್ಲ, ತಕ್ಷಣ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ‘ಯೂಸರ್‌ ಐಡಿ’ ಮತ್ತು ‘ಪಾಸ್‌ವರ್ಡ್‌’ ಅನ್ನು ಯಾರೋ ಬದಲಾಯಿಸಿರುವುದು ಅವರ ಗಮನಕ್ಕೆ ಬಂದಿದೆ.

ಸಂಸ್ಥೆಯ ಹೆಸರಿನಲ್ಲಿದ್ದ ಖಾತೆಗಳನ್ನು ಪರಿಶೀಲಿಸಿದಾಗ ₹ 45.70 ಲಕ್ಷ ಹಣವನ್ನು ಅಪರಿಚಿತರು ಹಂತ ಹಂತವಾಗಿ ಆನ್‌ಲೈನ್‌ ಮೂಲಕ ಆರ್‌ಟಿಜಿಎಸ್‌ ಮಾಡಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಕೂಡಾ ಗೊತ್ತಾಗಿದೆ. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಜಗದೀಶ್‌ ಪತ್ನಿ ಮಂಗಳಾ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT