ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೌಡಿಪಟ್ಟಿಯಲ್ಲಿರುವ ವ್ಯಕ್ತಿಗಳ ‘ಫ್ಯಾನ್ ಪೇಜ್‌’ಗಳಿಗೆ ಕಡಿವಾಣ

Published 5 ಜುಲೈ 2024, 23:08 IST
Last Updated 5 ಜುಲೈ 2024, 23:08 IST
ಅಕ್ಷರ ಗಾತ್ರ

ಬೆಂಗಳೂರು: ರೌಡಿಪಟ್ಟಿಯಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿರುವ ‘ಫ್ಯಾನ್‌ ಪೇಜ್‌’ಗಳಿಗೆ ಕಡಿವಾಣ ಹಾಕಲು ಸಿಸಿಬಿ ಮುಂದಾಗಿದೆ.

ಸೈಬರ್ ಅಪರಾಧ ಠಾಣೆ ಪೊಲೀಸರ ಸಹಾಯದಿಂದ ಅಂತಹ ಪೇಜ್‌ಗಳನ್ನು ನಿಷ್ಕ್ರಿಯ ಮಾಡಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

‘ವಿಲ್ಸನ್ ಗಾರ್ಡನ್’ ನಾಗ, ‘ಸೈಲೆಂಟ್’ ಸುನೀಲ್‌, ‘ಸೈಕಲ್’ ರವಿ ಸೇರಿ ಅಪರಾಧ ಹಿನ್ನೆಲೆಯುಳ್ಳ ಹಲವು ರೌಡಿಗಳ ಹೆಸರಿನಲ್ಲಿ ‘ಸಿ’–ಬಾಸ್, ‘ಎನ್’–ಬಾಸ್, ‘ಎಸ್’– ಬಾಸ್... ಹೆಸರಿನ ಟ್ಯಾಗ್‌ಲೈನ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಪೇಜ್‌ಗಳನ್ನು ತೆರೆಯಲಾಗಿತ್ತು. ಇಂತಹ ಪೇಜ್ ಅನ್ನು ಸಾವಿರಾರು ಯುವಕರು ಹಿಂಬಾಲಿಸುತ್ತಿದ್ದರು. ಸಿನಿಮಾಗಳ ಸಂಭಾಷಣೆ ಹಾಗೂ ಹಾಡುಗಳನ್ನು ಬಳಸಿ ಪ್ರಚೋದಿಸಲಾಗುತ್ತಿದೆ. ಈ ಪೇಜ್‌ಗಳತ್ತ ಆಕರ್ಷಿತರಾಗುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT