ಬೆಂಗಳೂರು: ‘ಕಲಿಯುವುದು ಎಂದರೆ ಕೇವಲ ತರಗತಿ ಕೊಠಡಿಯೊಳಗಿನ ಶಿಕ್ಷಣ ಅಲ್ಲ. ಜನರೊಂದಿಗೆ ಮಾತನಾಡುವ ಮೂಲಕ ಸಾಕಷ್ಟು ಕಲಿಯುವುದಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಚಿರಂಜೀವಿ ಸಿಂಗ್ ಹೇಳಿದರು.

ಗ್ರಾಮಸೇವಾ ಸಂಘದ ಆಶ್ರಯದಲ್ಲಿ ಕೇಂದ್ರ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಅಹಿಂಸಾತ್ಮಕ ಸಂವಹನ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಜನಸಾಮಾನ್ಯರೊಂದಿಗೆ ಮಾತನಾಡುವುದರಿಂದ ಅವರ ಸಮಸ್ಯೆ, ಭಾವನೆಗಳನ್ನು ಸಾಕಷ್ಟು ಅರಿಯಬಹುದು’ ಎಂದ ಅವರು, ವೃತ್ತಿ ಬದುಕಿನ ಉದಾಹರಣೆಗಳನ್ನು ನೀಡಿದರು.

‘ವೃತ್ತಿಗೆ ಬಂದ ಆರಂಭದ ದಿನಗಳಲ್ಲಿ ನಮಗೆ ಹಳ್ಳಿಯಲ್ಲಿ ಕೆಲಸ ಮಾಡಲು ಸೂಚನೆ ಬಂದಿತ್ತು. ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದೆ. ಅಲ್ಲಿನ ಜನರಿಗೆ ಕುಡಿಯಲು ಹಗರಿ ಹಳ್ಳದ ಒರತೆ ನೀರಷ್ಟೇ ಇತ್ತು. ಜನರೊಂದಿಗೆ ವಾಸ್ತವ್ಯ ಹೂಡಿದಾಗ ಅವರ ಸಮಸ್ಯೆಗಳೂ ಅರಿವಾಗುತ್ತದೆ’ ಎಂದರು.

‘ನಾನು ಹಗಲು ವೇಳೆಯಲ್ಲಿ ಮಾತ್ರ ಪ್ರಯಾಣ ಮಾಡುತ್ತೇನೆ. ಏಕೆಂದರೆ ಈ ವೇಳೆಯಲ್ಲಿ ಎಲ್ಲವೂ ಕಾಣುತ್ತದೆ. ಜನರೊಂದಿಗೆ ಬೆರೆಯಲು ಅನುಕೂಲವಾಗುತ್ತದೆ’ ಎಂದರು.

ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಮಾತನಾಡಿ, ‘ಸಂವಹನ ಕೌಶಲವನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತದೆ. ಆದರೆ, ಅಹಿಂಸಾ ಸಂವಹನ ಇರಬೇಕು ಎನ್ನುವುದು ಯಾರಿಗೂ ಹೊಳೆಯುವುದಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ‘ಅಹಿಂಸಾ ಸಂವಹನ’ ವಿಷಯವನ್ನು ಪಠ್ಯಕ್ರಮದಲ್ಲಿ ತರಲಾಗುವುದು’ ಎಂದು ಹೇಳಿದರು.

‘ಶಿಕ್ಷಣ ಎಂದರೆ ಕೇವಲ ಪಠ್ಯಕ್ರಮದ ಓದುವಿಕೆ, ಕಲಿಯುವಿಕೆ ಅಷ್ಟೇ ಅಲ್ಲ. ಶಿಕ್ಷಣವು ಪಠ್ಯ, ಶಿಕ್ಷಕರು, ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳ ನಡುವೆ ಪರಸ್ಪರ ಸಂಬಂಧವನ್ನು ಬೆಸೆಯುತ್ತದೆ’ ಎಂದರು.

‘ಇಂದು ಎಲ್ಲಿ ನೋಡಿದರೂ ಕಿರುಚಾಟ, ಕೂಗಾಟವಷ್ಟೇ ಕೇಳುತ್ತಿದೆ. ನಮಗೆ ಇನ್ನೊಬ್ಬರ ಮಾತು ಕೇಳುವ ವ್ಯವಧಾನ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿರುವ ನಾವು ಮಕ್ಕಳ ಹೃದಯದ ಜತೆ ಮಾತನಾಡಬೇಕು’ ಎಂದರು.

ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಯಾವುದೇ ಸಮಸ್ಯೆಗಳಿಗೆ ನಾವು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಶಾಂತಿಯುತವಾದ ವ್ಯವಹಾರ ಮಾಡಬಹುದು. ಇದೇ ಪರಿಕಲ್ಪನೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಬೇಕು. ಅಹಿಂಸಾತ್ಮಕ ಸಂವಹನದ ಕುರಿತು ಒತ್ತಾಯಿಸಿ ಅ. 6ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.