ಗುರುವಾರ , ಮೇ 19, 2022
21 °C
ಅಂಬೇಡ್ಕರ್‌ ಹಬ್ಬದ ದಿನ ‘ಬೋಧಿವೃಕ್ಷ’ ಹಾಗೂ ‘ಬೋಧಿವರ್ಧನ’ ಪ್ರಶಸ್ತಿ ಪ್ರದಾನ

ಆರು ಮಂದಿಗೆ ಸ್ಫೂರ್ತಿಧಾಮ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಂಬೇಡ್ಕರ್ ಹಬ್ಬ’ದ ಅಂಗವಾಗಿ ಸ್ಫೂರ್ತಿಧಾಮ ನೀಡುವ 2022ನೇ ಸಾಲಿನ ‘ಬೋಧಿವೃಕ್ಷ’ ಹಾಗೂ ‘ಬೋಧಿವರ್ಧನ’ ಪ್ರಶಸ್ತಿಗಳಿಗೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಹದಿನಾಲ್ಕು ವರ್ಷಗಳಿಂದ ಡಾ.ಬಿ.ಆರ್‌. ಅಂಬೇಡ್ಕರ್ ಜಯಂತಿಯನ್ನು ‘ಅಂಬೇಡ್ಕರ್ ಹಬ್ಬ’ವಾಗಿ ಆಚರಿಸಿ ಕೊಂಡು ಬರುತ್ತಿರುವ ಸ್ಫೂರ್ತಿಧಾಮ
ವು, ತಳ ಸಮುದಾಯಗಳ ಏಳ್ಗೆಗಾಗಿ ದುಡಿದವರನ್ನು ಗುರುತಿಸಿ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ’ ಹೆಸರಿನ ಒಂದು ರಾಷ್ಟ್ರ ಪ್ರಶಸ್ತಿ ಮತ್ತು ‘ಬೋಧಿವರ್ಧನ’ ಹೆಸರಿನಲ್ಲಿ ಐದು ರಾಜ್ಯ ಪ್ರಶಸ್ತಿಗಳನ್ನು ನೀಡುತ್ತಿದೆ.

‘ಬೋಧಿವೃಕ್ಷ’ವು ಪ್ರಶಸ್ತಿ ಫಲಕ ಮತ್ತು ₹1 ಲಕ್ಷ ನಗದು ಹಾಗೂ ‘ಬೋಧಿವರ್ಧನ’ವು ಪ್ರಶಸ್ತಿ ಫಲಕ ಮತ್ತು ತಲಾ ₹25 ಸಾವಿರ ನಗದು ಒಳಗೊಂಡಿದೆ. ಏ.14ರಂದು ಮಾಗಡಿ ರಸ್ತೆಯಲ್ಲಿನ ಸ್ಫೂರ್ತಿಧಾಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

‘ಬೋಧಿವೃಕ್ಷ’ ಪ್ರಶಸ್ತಿಗೆ ತೆಲಂಗಾಣದ ಡಾ.ರಾಳ್ಳಪಲ್ಲಿ ಶಿವ ಪ್ರವೀಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರವೀಣ್‌ ಕುಮಾರ್‌ ಅವರು ತೆಲಂಗಾಣದ ತಳ ಸಮುದಾಯಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಮೂಲಕ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.
2 ಲಕ್ಷಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಮಕ್ಕಳ ಬದುಕಿನಲ್ಲಿ ಆಮೂಲಾಗ್ರ ಪರಿವರ್ತನೆ ತಂದಿದ್ದಾರೆ. ಇವರ ಪ್ರಯತ್ನದಿಂದ, ಕಳೆದ 5 ವರ್ಷಗಳಲ್ಲಿ 325 ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ, 220 ವಿದ್ಯಾರ್ಥಿಗಳು ಐಐಟಿ ಮತ್ತು ಎನ್‍ಐಟಿಗಳಲ್ಲಿ ಹಾಗೂ ಸಾವಿರಾರು ವಿದ್ಯಾರ್ಥಿಗಳು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಪ್ರವೀಣ್ ಕುಮಾರ್ ಅವರು ಐಪಿಎಸ್ ಅಧಿಕಾರಿ
ಯಾಗಿದ್ದವರು.

‘ಬೋಧಿವರ್ಧನ’ ಪ್ರಶಸ್ತಿಗೆ ಗುರುಪ್ರಸಾದ್ ಕೆರಗೋಡು,
ಡಿ.ನಾಗಲಕ್ಷ್ಮಿ, ಪದ್ಮಾಲಯ ನಾಗರಾಜ್, ಡಾ. ಬಿ.ಪಿ. ಮಹೇಂದ್ರ ಕುಮಾರ್ ಮತ್ತು ಮೇರಿ ಲೋಬೋ
ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು