ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಬೆಳವಣಿಗೆ ಭಾರತಕ್ಕೆ ಎಚ್ಚರಿಕೆ ಗಂಟೆ: ಪ್ರೊ.ಬಿ.ಕೆ. ಚಂದ್ರಶೇಖರ್

Last Updated 22 ಜುಲೈ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರೀಲಂಕಾದಲ್ಲಿನ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿವೆ’ ಎಂದುಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ತಿಳಿಸಿದ್ದಾರೆ.

’ಶ್ರೀಲಂಕಾದಲ್ಲಿ ನಡೆದಿರುವ ಘಟನೆಗಳು ದುರದೃಷ್ಟವಶಾತ್ ಭಾರತದಲ್ಲೂ ವ್ಯಾಪಕವಾಗಿವೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದೌರ್ಜನ್ಯ, ಹಿಂಸೆಗಳು ಹೆಚ್ಚುತ್ತಿವೆ. ಅವರ ಆಸ್ತಿ ಜಪ್ತಿ ಜತೆಗೆ, ಮನೆಗಳನ್ನು ನೆಲಸಮಗೊಳಿಸುವಂತಹ ಘಟನೆಗಳು ನಡೆಯುತ್ತಿವೆ. ಸಂವಿಧಾನವು ಅವರಿಗೆ ನೀಡಿದ ಭಾರತೀಯ ನಾಗರಿಕರು ಎನ್ನುವ ಗುರುತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ದೂರಿದ್ದಾರೆ.

‘ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಜಗತ್ತಿನಾದ್ಯಂತ ಸಾರುತ್ತಲೇ ಸರ್ಕಾರದ ನೀತಿ-ನಿರ್ಧಾರಗಳನ್ನು ವಿರೋಧಿಸುವವರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುವ ಕೆಲಸವೂ ನಡೆದಿದೆ’ ಎಂದು ಟೀಕಿಸಿದ್ದಾರೆ.

‘ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರಗಳನ್ನು ತಡೆಯಲು ವಿಫಲವಾಗಿರುವ ಸರ್ಕಾರ, ಹುಸಿ ರಾಷ್ಟ್ರೀಯತೆ, ಉಗ್ರ ರಾಷ್ಟ್ರೀಯವಾದ ಮತ್ತು ಕೋಮು ಭಾವನೆ ಹರಡುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ಸರ್ಕಾರದ ನೀತಿಗಳನ್ನು ವಿರೋಧಿಸುವವರು, ವಿಮರ್ಶಿಸುವವರನ್ನು ವಿನಾಕಾರಣ ಜೈಲಿಗೆ ದೂಡುವ ಮೂಲಕ ಸಂವಿಧಾನದತ್ತ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬ್ರಿಟಿಷರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರನ್ನು ಎರಡು ಪ್ರಮುಖ ಧಾರ್ಮಿಕ ಸಮುದಾಯಗಳು ಎಂದು ಗುರುತಿಸಿದರು. ಈ ಎರಡೂ ಸಮುದಾಯಗಳನ್ನು ಬಹುಸಂಖ್ಯಾತರು (ಹಿಂದೂ) ಮತ್ತು ಅಲ್ಪಸಂಖ್ಯಾತರು (ಮುಸ್ಲಿಂ) ಎಂದು ವಿಂಗಡಿಸಲಾಯಿತು. ನಂತರ ಸಂಘಪರಿವಾರದ ಹಿಂದುತ್ವದ ಕಲ್ಪನೆಗೆ ಒಂದು ಹೆಜ್ಜೆಯಷ್ಟೇ ಬೇಕಿತ್ತು. ಹೀಗಾಗಿ, ಎರಡು ಸಮುದಾಯಗಳಿಗೆ ‘ಹಿಂದೂ’ ಮತ್ತು ‘ಮುಸ್ಲಿಂ’ ಎನ್ನುವ ಅಸ್ಮಿತೆ ಅಂಟಿಸಲಾಯಿತು. ನಮ್ಮ ದೇಶವನ್ನು ಹಿಂದೂ ರಾಷ್ಟ್ರವೆಂದು ಕರೆದಿರುವುದು ಸಾವರ್ಕರ್ ಅವರ ಹಿಂದುತ್ವ ಎಂಬ ಕೋಮು ಸಿದ್ಧಾಂತದ ಕೊಡುಗೆ! ಭಾರತದ ಸಂವಿಧಾನ ಗುರುತಿಸಿರುವುದು ‘ನಾಗರಿಕ’ ಅಥವಾ ‘ಪ್ರಜೆ’ಯ ಕಲ್ಪನೆಯನ್ನೇ ಹೊರತು ಯಾವುದೇ ಧಾರ್ಮಿಕ ಸಮುದಾಯವನ್ನಲ್ಲ. ಇಂಥಾ (ಅ)ವ್ಯವಸ್ಥೆ, ಭೇದಭಾವದ ಸಮಾಜದಲ್ಲಿ ಕಾನೂನಿನ ಅಧಿಪತ್ಯ ಕಟ್ಟುಕಥೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT